ಮೈಸೂರು: ವಚನ ಸಂವಿಧಾನ ಉಳಿಸೋಣ, ಬಹುತ್ವ ಸಮಾಜ ಕಟ್ಟೋಣ ಎಂಬ ಆಶಯದೊಂದಿಗೆ ಸಮಾನ ಮನಸ್ಕರ ವೇದಿಕೆಯಿಂದ ವರುಣ ಕ್ಷೇತ್ರದ ತಗಡೂರಿನಿಂದ ಆರಂಭವಾದ ಜನಜಾಗೃತಿ ಜಾಥಾದ ಬಹಿರಂಗ ಸಭೆ ಏ.18ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ ತಿಳಿಸಿದರು.
ಈಗಾಗಲೇ ಜಾಥಾ ಚಾಮರಾಜನಗರ, ಗುಂಡ್ಲುಪೇಟೆ ಮೂಲಕ ನಗರಕ್ಕೆ ಆಗಮಿಸಿದೆ. ಅಂದು ಸಂಜೆ 5.30ಕ್ಕೆ ಬಸವೇಶ್ವರ ವೃತ್ತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ಮೂಲಕ ಪುರಭವನ ತಲುಪಲಿದೆ. ಸಂಜೆ 6.30ಕ್ಕೆ ಪುರಭವದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಭೆಯಲ್ಲಿ ದೇವನೂರು ಮಹಾದೇವ, ಪ್ರೊ.ಕೆ.ಎಸ್. ಭಗವಾನ್. ಶಿವರಾಜಪ್ಪ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಈ ಸಂದರ್ಭ ಬಸವಣ್ಣ, ಅಂಬೇಡ್ಕರ್, ಗಾಂಧಿ, ಕುವೆಂಪು ಅವರ ಆದರ್ಶಗಳನ್ನು ಜನತೆಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಮಖಂಡರಾದ ಜಗನ್, ಸಿದ್ದಸ್ವಾಮಿ, ಸೋಸಲೆ ಸಿದ್ದರಾಜು, ಸೋಮಶೇಖರ್, ಮಹದೇವು ಇತರರು ಇದ್ದರು.