

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಜು.೧ ರಂದು ಕಕ್ಕಬ್ಬೆ ಜಂಕ್ಷನ್‌ನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಕ್ಕಬ್ಬೆ, ಕುಂಜಿಲ, ಯವಕಪಾಡಿ, ನಾಲಡಿ ಸುತ್ತಮುತ್ತಲಿನ ಎಲ್ಲಾ ಕೊಡವ ಮತ್ತು ಕೊಡವತಿಯರು ಮಾನವ ಸರಪಳಿಯಲ್ಲಿ ಭಾಗವಹಿಸಿ ಪವಿತ್ರ ಕೊಡವ ಲ್ಯಾಂಡ್‌ನ ಸಂರಕ್ಷಣೆಗಾಗಿ ಪಣತೊಡುವಂತೆ ಮನವಿ ಮಾಡಿದ್ದಾರೆ. ಕೃಷಿ ಭೂಮಿಯನ್ನು ವಾಣಿಜ್ಯ ದುರುದ್ದೇಶವನ್ನಾಗಿ ಪರಿವರ್ತಿಸಲು ನಮ್ಮ ಪ್ರಾಚೀನ ಭೂಮಿ ಮತ್ತು ದೀರ್ಘಕಾಲಿಕ ಜಲಮೂಲಗಳನ್ನು ಲೂಟಿ ಮಾಡಲಾಗುತ್ತಿದೆ. ಇದು ಸ್ಥಳೀಯ ಕೊಡವರ ಅಸ್ಮಿತೆ, ಅಸ್ತಿತ್ವ ಮತ್ತು ಕೊಡವ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ಆರೋಪಿಸಿದ್ದಾರೆ.