ಘನತ್ಯಾಜ್ಯ ವಿಲೇವಾರಿಗೆ ಜನಜಾಗೃತಿ

Untitled-1
ವಿಜಯಪುರದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯೆ ಭವ್ಯಾ ಮಧು, ಉಪಾಧ್ಯೆ ತಾಜುನ್ನಿಸಾ, ಸದಸ್ಯರಾದ ಎಂ.ಸತೀಶ್​ ಕುಮಾರ್​, ಸದಸ್ಯೆ ಶಿಲ್ಪಾ ಅಜಿತ್​, ಪ್ರಗತಿ ಶಾಲೆ ಮುಖ್ಯ ಶಿಕ್ಷಕ ಬಸವರಾಜ್​, ಶಿಕ್ಷಕರು ಇದ್ದರು.
Published on

ವಿಜಯಪುರ : ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಕೇವಲ ಒಬ್ಬರಿಂದ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಬೇಕು ಎಂದು ಪುರಸಭೆ ಸದಸ್ಯ ಎಂ.ಸತೀಶ್​ ಕುಮಾರ ತಿಳಿಸಿದರು.

ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ನತ್ಯಾಜ್ಯ ವಿಲೇವಾರಿ ಪರಿಸರ ಸಂರಕ್ಷಣೆಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಗರಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದು, ಹಸಿ ಕಸ, ಒಣ ಕಸ, ಆಸ್ಪತ್ರೆ ತ್ಯಾಜ್ಯ ಮತ್ತು ಇ&ತ್ಯಾಜ್ಯವನ್ನು ಹೇಗೆ ನಾಗರಿಕರು ಮನೆಯಲ್ಲಿಯೇ ವಿಂಗಡಿಸಿ ಪುರಸಭೆ ಸ್ವಚ್ಛತಾ ವಾಹನಕ್ಕೆ ನೀಡಬೇಕೆಂದು ಅರಿವು ಮೂಡಿಸಲಾಗುತ್ತಿದೆ ಎಂದರು.

ಪುರಸಭೆ ಅಧ್ಯೆ ಭವ್ಯಾ ಮಧು ಮಾತನಾಡಿ, ಮುಂದಿನ ಪೀಳಿಗೆಗಾಗಿ ಸ್ವಚ್ಛ ಸುಂದರ ಪರಿಸರವನ್ನು ನಿರ್ಮಿಸಬೇಕಿದೆ. ಪ್ರತಿಯೊಬ್ಬರು ಪರಿಸರದ ಪ್ರೆ ಹಾಗೂ ಜ್ಞಾನ ಗಳಿಸಿಕೊಂಡು ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಬೇಕು ಎಂದರು.

ಪುರಸಭೆ ಉಪಾಧ್ಯೆ ತಾಜುನ್ನಿಸಾ, ಸದಸ್ಯೆ ಶಿಲ್ಪಾ ಅಜಿತ್​, ಪ್ರಗತಿ ಶಾಲೆ ಮುಖ್ಯ ಶಿಕ್ಷಕ ಬಸವರಾಜ್​, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು. ಪ್ರಗತಿ ಪ್ರೌಢಶಾಲೆಯ 120 ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ವಾರ್ಡ್​ಗಳ 650ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ನತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net