ರಕ್ತದಾನದ ಕುರಿತು ಸಾರ್ವಜನಿಕರಿಗೆ ಜಾಗೃತಿ

17
Published on

ಮೈಸೂರು: ಜೀವಧಾರ ರಕ್ತ ನಿಧಿ ಕೇಂದ್ರದಿಂದ ನಗರದ ರಾಮಸ್ವಾಮಿ ವೃತದಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಲಾಯಿತು.

ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಗಣೇಶನ ವೇಷದಾರಿ ಧರಿಸಿದ್ದ ಹಳೆಯ ಕೆಸರೆಯ ಲೋಹಿತ್ ಸೋಮವಾರ ರಕ್ತದಾನದ ಮಹತ್ವ ಹಾಗೂ ಅರಿವು ಕುರಿತು ಜಾಗೃತಿ ಫಲಕ ಹಿಡಿದು ಜನರಿಗೆ ಕರಪತ್ರ ನೀಡಿ ವಿಶೇಷವಾಗಿ ಜಾಗೃತಿ ಮೂಡಿಸಿದರು.

ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ನಾವು ನಿರಂತರವಾಗಿ ರಕ್ತದಾನ ಬಗ್ಗೆ ಹಲವಾರು ವಿಧದಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ. ಗೌರಿ-ಗಣೇಶ ಹಬ್ಬ ಇರುವ ಹಿನ್ನೆಲೆಯಲ್ಲಿ ಒಂದು ವಿಭಿನ್ನವಾಗಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಮೂಢನಂಬಿಕೆಯನ್ನು ಬಿಟ್ಟು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬಹುದು ಎಂದು ಮನವಿ ಮಾಡಿದರು. ಮುಖಂಡರಾದ ಸೂರಜ್, ಸದಾಶಿವ, ಚಂದ್ರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net