ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಸಾರ್ವಜನಿಕರ ಮೆಚ್ಚುಗೆ

New Garniyar new
Published on

ಹುಬ್ಬಳ್ಳಿ : ಇಲ್ಲಿನ ಕೇಶ್ವಾಪುರದ ಮಧುರಾ ಎಸ್ಟೇಟ್​ನ ಸಭಾಭವನದಲ್ಲಿ ಶುಕ್ರವಾರದಂದು ಪ್ರತಿಷ್ಠಿತ ಗಾರ್ನಿಯರ್ ಕಂಪನಿಯಿಂದ ಹೇರ್ ಕಲರಿಂಗ್ ಅಭಿಯಾನ ನಡೆಯಿತು.

ಸಾರ್ವಜನಿಕರು, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಂಡರು. ಕಂಪನಿಯ ಪರಿಣಿತರು ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಹಚ್ಚಿದರು.

ಜೂ. 15ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹುಬ್ಬಳ್ಳಿ ಗೋಕುಲ ರಸ್ತೆಯ 3ನೇ ಅಡ್ಡ ರಸ್ತೆಯ ರವಿನಗರ ಉದ್ಯಾನದಲ್ಲಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೋಬೈಲ್ ಫೋನ್ ತಂದು, ಒಟಿಪಿ ಆಧಾರಿತ ನೋಂದಣಿ ಮಾಡಿಸಿಕೊಂಡು ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net