

ರಾಮದುರ್ಗ: ರಾಜ್ಯದಲ್ಲಿ ಶೇ.60 ಅಪರಾಧ ಪ್ರಕರಣಗಳು ಹೆಚ್ಚಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ. ಹೀಗಾಗಿ ಸರ್ಕಾರದ ವೈಲ್ಯ ಖಂಡಿಸಿ ಏ.7ರಂದು ಮೆಸೂರಿನಿಂದ ಬಿಜೆಪಿ ನೇತೃತ್ವದಲ್ಲಿ ಜನಾಕ್ರೋಶ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಸ್ಸಿ, ಎಸ್ಟಿ ಸಮುದಾಯದ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದ್ದು, ಇದರಲ್ಲಿ ಭಾಗಿಯಾದ ಕಾಂಗ್ರೆಸ್ ಮುಖಂಡರನ್ನು ಸರ್ಕಾರ ರಸುತ್ತಿದೆ. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿ ಧರ್ಮದ ಆಧಾರದ ಮೇಲೆ ದ್ವೇಷದ ಬೀಜ ಬಿತ್ತುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಭರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಮಾತೃ ವಂದನಾ, ಇಂದ್ರಧನುಷ್ ಯೋಜನೆ ಜಾರಿಯಿದ್ದರೂ ರಾಜ್ಯದಲ್ಲಿ 736 ಬಾಣಂತಿ, 1,100 ಶಿಶುಗಳು ಮರಣ ಹೊಂದಿರುವುದು ವಿಷಾದನೀಯ ಎಂದರು.
ಡೀಸೆಲ್, ವಿದ್ಯುತ್, ಆಸ್ತಿ ತೆರಿಗೆ, ರಸಗೊಬ್ಬರಗಳ ಮೇಲಿನ ತೆರಿಗೆ, ಆಸ್ಪತ್ರೆಗಳ ಸೇವಾ ಶುಲ್ಕ ಹೆಚ್ಚಿಸಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಬಿಸಿ ಮುಟ್ಟಿಸಿದೆ. ಇದನ್ನು ಪ್ರಶ್ನಿಸಿದ ಬಿಜೆಪಿ 15 ಶಾಸಕರನ್ನು ಸದನದಿಂದ 6 ತಿಂಗಳು ಅವಧಿಗೆ ಅಮಾನತುಗೊಳಿಸಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಹರಿಹಾಯ್ದರು.
ಧನಲ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯ ಡಾ.ಕೆ.ವಿ.ಪಾಟೀಲ, ಜಿಪಂ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ ಇತರರಿದ್ದರು.