ಪಿಯು ಪರೀಕ್ಷೆ ಬರೆದು ಮರಳುತ್ತಿದ್ದ ವಿದ್ಯಾರ್ಥಿ ಸಾವು, ಲಾರಿ, ಬೈಕ್ ನಡುವೆ ಅಪಘಾತ

4-vij-5a-apaghatha-2nd pu student savu
Published on

ವಿಜಯಪುರ: ಪಟ್ಟಣದ ಕೋಲಾರ-ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವಿನ ಅಘಾತದಲ್ಲಿ ದ್ವಿತೀಯ ಪಿಯುಸಿ ಬರೆದು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ವೆಂಕಟಾಪುರ ನಿವಾಸಿ ಮಧು (18) ಮೃತ. ಲಾರಿ ಚಾಲಕನನ್ನು ಬಂಧಿಸಿರುವ ವಿಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಿಶ್ಚಿತಾರ್ಥಕ್ಕೆ ಹೋಗಿದ್ದ: ವಿಜಯಪುರದ ಪರೀಕ್ಷಾ ಕೇಂದ್ರದಲ್ಲಿ ಮೊದಲ ದಿನದ ಪಿಯುಸಿ ಪರೀಕ್ಷೆ ಬರೆದಿದ್ದ ಮಧು, ಕುಟುಂಬದ ಸದಸ್ಯರೊಂದಿಗೆ ದೇವನಹಳ್ಳಿ ತಾಲೂಕು ಅತ್ತಿಬೆಲೆಯಲ್ಲಿ ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ಕೆ ಹೋಗಿದ್ದ. ಅಲ್ಲಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.

ಬೇಗ ಮನೆ ಸೇರಲು ಹೋಗಿ ಬಲಿಯಾದ!: ಕುಟುಂಬದವರೊಂದಿಗೆ ಕಾರಿನಲ್ಲಿ ತೆರಳಿದ್ದ ಮಧು ಸ್ವಗ್ರಾಮಕ್ಕೆ ಮರಳಲು ಬೈಕ್‌ನಲ್ಲಿ ಹೋಗುವುದಾಗಿ ತಿಳಿಸಿದ್ದ. ಕಾರಿನಲ್ಲಿ ಹೋದರೆ ತಡವಾಗುತ್ತದೆ, ಬೈಕ್‌ನಲ್ಲಿ ಬೇಗ ಮನೆ ಸೇರುತ್ತೇನೆ ಎಂದು ತಿಳಿಸಿ ಹೊರಟಿದ್ದ. ಈ ವೇಳೆ ಅಪಘಾತವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net