ಪ್ರಶ್ನೆ ಪತ್ರಿಕೆ ಸಿದ್ಧತಾ ಕಾರ್ಯಾಗಾರ

IMG_20230912_212514_499.jpg
Published on

ಹುಬ್ಬಳ್ಳಿ: ಪದವಿಪೂರ್ವ ಶಿಕ್ಷಣ ಇಲಾಖೆ, ಧಾರವಾಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂ ಹಾಗೂ ಡಾ. ಆರ್.ಬಿ. ಪಾಟೀಲ ಮಹೇಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಪ್ರಶ್ನೆ ಪತ್ರಿಕೆ ಸಿದ್ಧತಾ ಕಾರ್ಯಾಗಾರ ಮಂಗಳವಾರ ಜರುಗಿತು.

ಪದವಿಪೂರ್ವ ಶಿಣ ಇಲಾಖೆ ಉಪನಿರ್ದೇಶಕ ಕೆ.ಪಿ. ಸುರೇಶ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾಥಿರ್ಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಲಿ, ಧಾರವಾಡ ಜಿಲ್ಲೆಯು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಇರಬೇಕು. ಇದಕ್ಕಾಗಿ ಜಿಲ್ಲೆಯ ಎಲ್ಲ ಪ್ರಾಂಶುಪಾಲರು, ಉಪನ್ಯಾಸಕರ ಸಹಕಾರ, ಸಹಭಾಗಿತ್ವ ಅಗತ್ಯ ಎಂದರು.

ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಿ. ಹನುಮಂತಪ್ಪ ಅವರು, ಪ್ರಶ್ನೆಪತ್ರಿಕೆಯ ಸ್ವರೂಪ ಹಾಗೂ ಬದಲಾದ ನಿಯಮಾವಳಿಯ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರಾಮ ಮೋಹನ ಎಚ್.ಕೆ. ಅವರು, ಎಲ್ಲ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಷಯದ ಪ್ರಶ್ನೆ ಪತ್ರಿಕೆ ಸಿದ್ಧತಾ ಕಾರ್ಯಾಗಾರದಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ ಎಂದರು.

ಡಾ. ತೇಜಸ್ವಿನಿ ನಾರಾಯಣಕರ, ಸಂದ ಉಪಾಧ್ಯ ಅಶೋಕ ಸವಣೂರ, ಖಜಾಂಚಿ ಲಿಂಗರಾಜ ಬೆಲ್ಲದ, ಸಂಟನಾ ಕಾರ್ಯದರ್ಶಿ ಎಂ.ವಿ. ಹಡಪದ ಹಾಗೂ ನಿರ್ದೇಶಕ ಮಂಡಳಿ ಸದಸ್ಯರಾದ ಎ್.ಬಿ. ಸೊರಟೂರ, ಜಿ.ಎಚ್. ಕಟ್ಟಿ, ಜೆ.ಎಚ್. ಅಂತರಗಟ್ಟಿ, ಸುರೇಶ ಮರಿಲಿಂಗಣ್ಣವರ, ಜಯರಾಮ ಲಮಾಣಿ, ಎಂ.ಡಿ. ಕೊಟೆನ್ನವರ, ಆರ್.ಕೆ. ದೇಶಪಾಂಡೆ, ಎಲ್.ಎಲ್. ಲಮಾಣಿ, ವಿ.ಆರ್. ವಾಮೋಡೆ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿಷಯ ಪರಿಣಿತರು ಭಾಗಿಯಾಗಿದ್ದರು.

ದೀಪಾ ಮತ್ತು ಅನನ್ಯಾ ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್. ಹಿರೇಮಠ ನಿರೂಪಿಸಿದರು. ಪ್ರಾಚಾರ್ಯರ ಸಂದ ಪ್ರಧಾನ ಕಾರ್ಯದಶಿರ್ ಸಂದೀಪ ಬೂದಿಹಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net