ವಿಜಯನಗರ ಜಿಲ್ಲೆಯ ೧೮ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

IMG-20230309-WA0016.jpg
Published on

ಹೊಸಪೇಟೆ: ನೂತನ ವಿಜಯನಗರದಲ್ಲಿ ಇಂದಿನಿಂದ ಪಿಯುಸಿ ಪರೀಕ್ಷೆಗಳು ಪ್ರಾರಂಭಗೊಂಡಿದ್ದು, ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ೫, ಹರಪನಹಳ್ಳಿಯಲ್ಲಿ ೫, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಲಾ ಎರಡು ಸೇರಿದಂತೆ ಒಟ್ಟು ೧೮ ಕೇಂದ್ರಗಳಲ್ಲಿ ಪರೀಕ್ಷೆ ಆರಂಭಗೊAಡಿದೆ. ಪರೀಕ್ಷೆಯ ಮೊದಲ ದಿನವಾದ ಗುರುವಾರ ಕನ್ನಡ ಭಾಷೆಗೆ ೧೫,೨೫೮ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ನಿರಂತರ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳು, ಆತ್ನವಿಶ್ವಾಸದೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸಿದರು. ಪರೀಕ್ಷಾ ಭಯದಲ್ಲಿರುವ ಅನೇಕರು ಬೆಳಗ್ಗೆಯೇ ತಮ್ಮ ಆರಾಧ್ಯ ದೈವದ ದರ್ಶನಾರ್ಶೀವಾದ ಪಡೆದು, ಪರೀಕ್ಷೆಗೆ ಹಾಜರಾದರು. ಅನೇಕರು ತಮ್ಮ ಮಕ್ಕಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಧೈರ್ಯ ತುಂಬಿದರು.
ಪರ ಊರುಗಳಿಂದ ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯಿAದ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net