ಪಿಯು ಕಾಲೇಜುಗಳ ರಾಜ್ಯಮಟ್ಟದ ಬಾಲಕಿಯರ ಅಥ್ಲೆಟಿಕ್ಸ್; ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್, ಬೆಳಗಾವಿ ರನ್ನರ್‌ಅಪ್

Untitled
Published on

ಧಾರವಾಡ: ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕೂಟದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಕ್ರೀಡಾಪಟು ಶ್ರೀರಕ್ಷಾ ಅತ್ಯುತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದರು.
ದಕ್ಷಿಣ ಕನ್ನಡ ಜಿಲ್ಲೆಯ ಅಥ್ಲೆಟಿಕ್ ತಂಡ 42 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಹಾಗೂ ಬೆಳಗಾವಿ ಜಿಲ್ಲೆಯ ಅಥ್ಲೆಟಿಕ್ ತಂಡ 39 ಅಂಕ ಗಳಿಸಿ ರನ್ನರ್‌ಅಪ್ ಪ್ರಶಸ್ತಿಗೆ ಭಾಜನವಾಯಿತು. ಆತಿಥೇಯ ಧಾರವಾಡ ಜಿಲ್ಲೆ 32 ಅಂಕ ಪಡೆದು ತೃತೀಯ ಸ್ಥಾನ ಪಡೆಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘಗಳ ಆಶ್ರಯದಲ್ಲಿ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 3 ದಿನ ಅಥ್ಲೆಟಿಕ್ಸ್ ಕೂಟ ನಡೆಯಿತು.
ಬೆಂಗಳೂರು ಉತ್ತರ ಜಿಲ್ಲೆಯ ಕ್ರೀಡಾಪಟು ಶ್ರೀರಕ್ಷಾ 3,000 ಮೀ. ಓಟ, 1,500 ಮೀ. ಓಟದಲ್ಲಿ ಪ್ರಥಮ ಹಾಗೂ 4 ಕಿ.ಮೀ. ಕ್ರಾಸ್‌ಕಂಟ್ರಿ ಓಟದಲ್ಲಿ ತೃತೀಯ ಸ್ಥಾನ ಪಡೆದು 11 ಅಂಕಗಳೊಂದಿಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪಡೆದರು.

ಬುಧವಾರದ ಲಿತಾಂಶ: (ಅನುಕ್ರಮ ಸ್ಥಾನ)
* 1,500 ಮೀ. ಓಟ: ಶ್ರೀರಕ್ಷಾ- ಬೆಂಗಳೂರು ಉತ್ತರ, ಸುಷ್ಮಾ ಎಚ್.ಎನ್.- ಹಾಸನ, ಮಹಾಲಕ್ಷ್ಮೀ ಬಸಕಳಿ- ಬಾಗಲಕೋಟೆ.
* 200 ಮೀ. ಓಟ: ರೀತುಶ್ರೀ- ದಕ್ಷಿಣ ಕನ್ನಡ, ವೈಭವಿ ಬುದ್ರೂಕ್- ಬೆಳಗಾವಿ, ಅಪೂರ್ವ ನಾಯ್ಕ- ಬೆಳಗಾವಿ.
* 3 ಕಿ.ಮೀ. ನಡಿಗೆ: ಅಂಬಿಕಾ- ದಕ್ಷಿಣ ಕನ್ನಡ, ಭೀಮವ್ವ ಮಾಳಗೊಂಡ- ಧಾರವಾಡ, ದೀಕ್ಷಾ- ಉಡುಪಿ.
* 4 ಕಿ.ಮೀ. ಕ್ರಾಸ್‌ಕಂಟ್ರಿ ಓಟ: ಮಹಾಲಕ್ಷ್ಮೀ ಬಸಕಳಿ- ಬಾಗಲಕೋಟೆ, ಶಿಲ್ಪಾ ಹೊಸಮನಿ- ಧಾರವಾಡ, ಶ್ರೀರಕ್ಷಾ- ಬೆಂಗಳೂರು ಉತ್ತರ.
* 400 ಮೀ. ಹರ್ಡಲ್ಸ್: ಪ್ರಿಯಾಂಕಾ ಓಲೇಕಾರ- ಧಾರವಾಡ, ಅನಘಾ ಕೆ.ಎ.- ದಕ್ಷಿಣ ಕನ್ನಡ, ಅರ್ನಿಕಾ ವರ್ಷಾ ಡಿಸೋಜಾ- ಉಡುಪಿ.
* ಹ್ಯಾಮರ್ ಥ್ರೋ: ಸ್ಪ ೃಹ ನಾಯ್ಕ- ಬೆಳಗಾವಿ, ಪೃಥ್ವಿ ಕೆ- ದಕ್ಷಿಣ ಕನ್ನಡ, ಅನುಷಾ ಬಿ.- ದಕ್ಷಿಣ ಕನ್ನಡ.
* ಜಾವೆಲಿನ್ ಥ್ರೋ: ದಿಶಾ ಎಸ್.- ಬೀದರ, ಬಾಳಕ್ಕ ಪಾಟೀಲ- ಬೆಳಗಾವಿ, ಮಾಧುರ್ಯ- ಉಡುಪಿ.
* ಪೋಲ್‌ವಾಲ್ಟ್: ಎನ್. ಅಶ್ವಿನಿ- ಬಳ್ಳಾರಿ, ಲಕ್ಷ್ಮೀ ಕಮತಮನಿ- ಧಾರವಾಡ, ಕವನಾ ಎಂ.- ಶಿವಮೊಗ್ಗ.
* 4*400 ರಿಲೇ: ಧಾರವಾಡ ಜಿಲ್ಲೆಯ ಪ್ರಿಯಾಂಕಾ ಓಲೇಕಾರ, ಸುಪ್ರೀತಾ ಸಿದ್ಧಿ, ಮುಸ್ಕಾನ್ ಮುಕ್ಕೇರಿ, ಸಾನಿಯಾಸಾಬ್ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಯ ರೀತುಶ್ರೀ ಹಾಗೂ ತಂಡ ದ್ವಿತೀಯ, ಬೆಂಗಳೂರು ಉತ್ತರ ಜಿಲ್ಲೆಯ ಶ್ರೀರಕ್ಷಾ ಹಾಗೂ ತಂಡ ತೃತೀಯ, ಬೆಳಗಾವಿ ಜಿಲ್ಲೆಯ ವೈಭವಿ ಬುದ್ರೂಕ್ ಹಾಗೂ ತಂಡ ಚತುರ್ಥ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net