

ಆರ್ಡಿ: ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 5 ನೇ ರ‌್ಯಾಂಕ್ ಗಳಿಸಿದ ಹೆಬ್ರಿ ಎಸ್.ಆರ್.ಪಿಯು ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಶೆಟ್ಟಿಗೆ ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕುದ್ರುಬೀಡು ಕೊಳ್ಕೆಬೈಲು ಶ್ರೀಉವಾಮಹೇಶ್ವರ ದೇವಳದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ನೆರಳು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಕ್ರಮಧಾರಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುವಾರ್ ಶೆಟ್ಟಿ, ಹೆಬ್ರಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಗೋಪಾಲ ಕುಲಾಲ, ಕುದ್ರುಬೀಡು ಕೊಳ್ಕೆಬೈಲು ಶ್ರೀಉವಾಮಹೇಶ್ವರ ದೇವಳದ ಅಧ್ಯಕ್ಷ ಅಶೋಕ ಕುವಾರ್ ಹೆಗ್ಡೆ, ಹೆಬ್ರಿ ತಾಲೂಕು ಗ್ರಾಮ ವಿಕಾಸ ಶಿಕ್ಷಣ ಮತ್ತು ಸಂಸ್ಕಾರದ ಸಹ ಸಂಯೋಜಕಿ ಉಷಾಪ್ರಕಾಶ ಶೆಟ್ಟಿ ಬೆಪ್ಡೆ, ಬೆಪ್ಡೆ ಗೋಡೆಬೆಟ್ಟು ಸಂತೋಷ ಶೆಟ್ಟಿ, ವಾಲತಿ ಶೆಟ್ಟಿ ಹಾಗೂ ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರವೀಣ್ ಎಂ. ಸ್ವಾಗತಿಸಿದರು. ರಾಜೀವ ಪೂಜಾರಿ ನಿರೂಪಿಸಿ, ವಂದಿಸಿದರು.