ರೈತಪರ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ- ಸುಭಾಷ್ ಪಾಟೀಲ

IMG-20251025-WA0134.jpg
Published on

ಬೆಳಗಾವಿ; ಸರ್ಕಾರವು ಪ್ರತಿಟನ್ ಕಬ್ಬಿಗೆ 3300/- ರೂ ಘೋಷಣೆ ಮಾಡಿರಯವು್ಉ ರೈತಪರ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ತಿಳಿಸಿದ್ದಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಬಿಜೆಪಿಯ ರಾಜ್ಯ ಅಧ್ಯಕ್ಷರಾದ ಬಿ.ವಾಯ್.ವಿಜಯೇಂದ್ರ ಅವರು ಕಬ್ಬು ಬೆಳೆಗಾರರ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ ತಮ್ಮ ಹುಟ್ಟು ಹಬ್ಬವನ್ನು ಪ್ರತಿಭಟನಾ ಸ್ಥಳದಲ್ಲೇ ಇದ್ದು ಆಚರಿಸಿದ್ದು ಅವರ ರೈತಪರ ಕಾಳಜಿಗೆ ಒಂದು ನಿದರ್ಶನ.

ಶಶಿಕಾಂತ ಪಡಸಲಗಿ, ಚೂನಪ್ಪ ಪೂಜೇರಿ ಅವರ ನೇತೃತ್ವದಲ್ಲಿ ಗುರ್ಲಾಪೂರ ಕ್ರಾಸ್ ದಲ್ಲಿ ಪ್ರಾರಂಭವಾದ ಈ ಹೋರಾಟದ ಕಿಚ್ಚು ಕಳೆದ ಹತ್ತು ದಿನಗಳಿಂದ ರಾಜ್ಯದ ನಾನಾ ಜಿಲ್ಲೆಗೆ ವ್ಯಾಪಿಸಿ ಹೋರಾಟ ತೀವೃ ಆಗುತ್ತಿದ್ದಂತೆ ರಾಜ್ಯ ಸರ್ಕಾರ ಇಂದು ರಾಜ್ಯದ ರೈತರಿಗೆ ತಲೆಬಾಗಿ ಪ್ರತಿ ಟನ್ ಕಬ್ಬಿಗೆ 3300/- ಬೆಲೆ ನಿಗದಿ ಮಾಡಿದೆ

ಹೀಗೆ ಹಗಲು-ರಾತ್ರಿ ಎನ್ನದೇ ಕಬ್ಬು ಬೆಳೆಗಾರರ ಈ ರೈತಪರ ಯಶಸ್ವಿ ಹೋರಾಟದಲ್ಲಿ ಭಾಗಿಯಾದ ಎಲ್ಲ ರೈತರಿಗೂ,ರೈತಪರ ಸಂಘಟನೆಗಳಿಗೂ, ಶ್ರೀಗಳಿಗೆ, ವಿವಿಧ ಸಂಘಟನೆಗಳಿಗೂ, ಸಾರ್ವಜನಿಕರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net