ಪಂ. ತಾರಾನಾಥ ಅಪರೂಪದ ವ್ಯಕ್ತಿ

15 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ರಾಜೀವ ತಾರಾನಾಥರ ಮಾತು ಕಠೋರವಾಗಿದ್ದರೂ ಮನಸು ತಾಯಿ ಮನಸ್ಸಾಗಿತ್ತು ಎಂದು ಸರೋದ ವಾದಕ ಪಂ. ಫಯಾಜ ಖಾನ್​ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ವತಿಯಿಂದ ಸಂಘದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರೋದ ಕಲಾವಿದ ಪಂ. ರಾಜೀವ ತಾರಾನಾಥ ಅವರ ನುಡಿನಮನ ಸಭೆಯಲ್ಲಿ ಅವರು ಮಾತನಾಡಿದರು.
ತಾರಾನಾಥರು ಸಮಯ, ಶಿಸ್ತಿಗೆ ಹೆಸರಾದವರು. ದೊಡ್ಡ ದೊಡ್ಡ ಕಲಾವಿದರು ಸಾಕಷ್ಟಿದ್ದಾರೆ. ಆದರೆ ತಾರಾನಾಥ ಅವರಂತಹವರು ಒಬ್ಬರೇ ಇದ್ದವರು. ಸುತ್ತಲಿನ ಆಗುಹೋಗುಗಳ ಬಗ್ಗೆ ಸ್ಪಂದಿಸುತ್ತಿದ್ದರು. ಅವರ ಅಗಲುವಿಕೆ ಬಹು ದೊಡ್ಡ ಹಾನಿ ಎಂದೇ ಹೇಳಬೇಕು. ಅವರ ನಡೆ ನುಡಿಯಿಂದ ನಮ್ಮ ಮನದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ ಎಂದರು.
ಡಾ. ಮೃತ್ಯುಂಜಯ ಶೆಟ್ಟರ, ಡಾ. ಶಾಂತಾರಾಮ ಹೆಗಡೆ, ಡಾ. ಶಶಿಧರ ನರೇಂದ್ರ, ಪ್ರೊ. ಶಶಿಧರ ತೋಡಕರ, ಪಂ. ಅರಣ್ಯಕುಮಾರ ಎಂ., ಸಿ.ಯು. ಬೆಳ್ಳಕ್ಕಿ, ಡಾ. ವೀರಣ್ಣ ರಾಜೂರ, ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಅಧ್ಯಕ್ಷ ಎಂ.ಎಂ. ಚಿಕ್ಕಮಠ ಮಾತನಾಡಿದರು.
ಶಂಕರ ಹಲಗತ್ತಿ, ಪ್ರಕಾಶ ಬಾಳಿಕಾಯಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಡಿ. ಎಂ. ಹಿರೇಮಠ, ಡಾ. ಎಸ್​. ಎಂ. ಶಿವಪ್ರಸಾದ, ಕೆ.ಎಚ್​. ನಾಯಕ, ಎ.ಎಲ್​. ದೇಸಾಯಿ, ಮಹಾಂತೇಶ ನರೇಗಲ್ಲ, ಎಚ್​. ಜಿ. ದೇಸಾಯಿ, ಪ್ರಮೀಳಾ ಜಕ್ಕಣ್ಣವರ, ಅನಿತಾ ಚಿಕ್ಕಮಠ ಎಂ.ಬಿ. ಹೆಗ್ಗೇರಿ, ಶಂಕರ ಕುಂಬಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net