ಪಂ. ರಾಮರಾವ್ ವಿ. ನಾಯಕ್ ಸ್ಮರಣೆ ಮತ್ತು ಹಿಂದುಸ್ತಾನಿ ಗಾಯನ

Music _1
Published on

ನಗರದ ಸ್ವರಸಂಕುಲ ಸಂಗೀತ ಸಭಾ ವತಿಯಿಂದ ನ.20 ರಂದು ಸಂಜೆ 6 ಗಂಟೆಗೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಪಂ. ರಾಮರಾವ್ ವಿ. ನಾಯಕ್ ಸ್ಮರಣೆ ಮತ್ತು ಹಿಂದುಸ್ತಾನಿ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ವಿದುಷಿ ಅಮೃತಾ ಶೆಣೈ ಕಾಮತ್ ಹಿಂದುಸ್ತಾನಿ ಹಾಡುಗಾರಿಕೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರಿಗೆ ಹಾರ್ಮೋನಿಯಂನಲ್ಲಿ ಪಂ.ವೀರಭದ್ರಯ್ಯ ಹಿರೇಮಠ್ ಮತ್ತು ತಬಲಾದಲ್ಲಿ ಪಂ.ಉದಯರಾಜ್ ಕರ್ಪೂರ್ ಸಹಕಾರ ನೀಡಲಿದ್ದಾರೆ.

ಇದಕ್ಕೂ ಮುನ್ನ ಉದ್ಯಮಿ ಹಾಗೂ ಕಲಾಪೋಷಕ ಡಾ.ಎಂ.ಜಗನ್ನಾಥ್ ಶೆಣೈ ಅವರಿಗೆ ಸನ್ಮಾನ ಕಾರ್ಯಕ್ರಮವಿರಲಿದೆ. ಮುಖ್ಯ ಅತಿಥಿಯಾಗಿ ರಂಗಕರ್ಮಿ ಜಯರಾಂ ಪಾಟೀಲ್ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net