

* ಸಾರ್ವಜನಿಕ ಸ್ವಾಮ್ಯದ 23 ಉದ್ಯಮಗಳ ಖಾಸಗೀಕರಣಕ್ಕೆ ಕೇಂದ್ರ ನಿರ್ಧಾರ * ಕೈಜಾರಲಿವೆ ಬಿಇಎಂಎಲ್, ಕೆಎಪಿಎಲ್ ಮೃತ್ಯುಂಜಯ ಕಪಗಲ್
ಕಾರಣ ಏನು? * ಆರ್ಥಿಕ ಚಟುವಟಿಕೆ ಪ್ರೋತ್ಸಾಹಿಸುವುದು * ಸಾರ್ವಜನಿಕ ಉದ್ಯಮದ ಪುನಶ್ಚೇತನ * ನೌಕರರು, ಕಾರ್ವಿುಕರ ಭವಿಷ್ಯ
ಬೆಂಗಳೂರು: ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನಶ್ಚೇತನದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ರಾಜ್ಯದ ಮೊದಲ ಸರ್ಕಾರಿ ಸ್ವಾಮ್ಯದ ಈ ಉಕ್ಕು ಉದ್ಯಮದ ಜತೆಯಲ್ಲೇ ಬೆಂಗಳೂರಿನಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಹಾಗೂ ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ವಸುಟಿಕಲ್ಸ್ ಲಿಮಿಟೆಡ್ (ಕೆಎಪಿಎಲ್) ಸಹ ಖಾಸಗೀಕರಣಗೊಳ್ಳುವುದು ನಿಶ್ಚಿತವಾಗಿದೆ. ಇದನ್ನೂ ಓದಿ: 4 ವರ್ಷ ಪ್ರಯತ್ನಿಸಿದರೂ ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‌ಪಿನ್‌ಗೆ ಸಿಗಲಿಲ್ಲ ಜಾಮೀನು!
ದುಃಸ್ಥಿತಿಗೆ ಸಿಲುಕಿರುವ ಸಾರ್ವಜನಿಕ ವಲಯದ ಉದ್ಯಮದ ಪುನಶ್ಚೇತನ, ಆರ್ಥಿಕ ಚಟುವಟಿಕೆಗೆ ಉತ್ತೇಜನ, ನೌಕರರು ಮತ್ತು ಕಾರ್ವಿುಕರ ಹಿತದೃಷ್ಟಿಯಿಂದ ಖಾಸಗೀಕರಣ ಸಮಂಜಸವಾಗಿದೆ. ಕಾಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ. | ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ
ಕೇಂದ್ರ ಸರ್ಕಾರ ಸಾರ್ವಜನಿಕ ಸ್ವಾಮ್ಯದ ನಷ್ಟಪೀಡಿತ 23 ಉದ್ಯಮಗಳ ಖಾಸಗೀಕರಣಕ್ಕೆ ನಿರ್ಧರಿಸಿದೆ. ಈ ಪಟ್ಟಿಯಲ್ಲಿ ರಾಜ್ಯದ ಈ 3 ಉದ್ಯಮಗಳು ಸ್ಥಾನ ಪಡೆದಿವೆ. ಕೇಂದ್ರ ಹಣಕಾಸು ಸಚಿವಾಲಯದಡಿ ಬರುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ನೀಡಿದ ಮಾಹಿತಿಯಿಂದ ಉದ್ಯಮಗಳ ಖಾಸಗೀಕರಣ ಪಟ್ಟಿ ಹೊರಬಿದ್ದಿದೆ. ಇದನ್ನೂ ಓದಿ:ಮರಳು ಮಿಶ್ರಿತ ಗೊಬ್ಬರ ಪೂರೈಕೆಗೆ ತೀವ್ರ ಖಂಡನೆ, ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ಲಾಭದಲ್ಲಿದೆ ಬಿಇಎಂಎಲ್ ಗಣಿ ಮತ್ತು ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ಬಿಇಎಂಎಲ್ ಛಾಪು ಮೂಡಿಸಿದೆ. ಕಳೆದ ಆರ್ಥಿಕ ವರ್ಷದ ವರದಿ ಪ್ರಕಾರ 3,077 ಕೋಟಿ ರೂ. ಆದಾಯ ತಂದು ಕೊಟ್ಟಿದೆ. 7,185 ಸಿಬ್ಬಂದಿ ಬಲವನ್ನು ಹೊಂದಿದೆ. ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ವಸುಟಿಕಲ್ಸ್ ಲಿ. ಕೈಗಾರಿಕೆ ವಾರ್ಷಿಕ 100 ರಿಂದ 500 ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ಜನ-ಸಾಮಾನ್ಯರ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಮಾತ್ರೆ, ಔಷಧ ತಯಾರಿಸುತ್ತದೆ ಎಂಬ ಹೆಗ್ಗಳಿಕೆಯಿದೆ. ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚದಲ್ಲಿ ಸುಧಾರಣೆ ಸಾಧಿಸಿದ್ದಕ್ಕಾಗಿ 2019ರ ನೈಪುಣ್ಯತೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಿಂದ ಪಡೆದುಕೊಂಡಿದೆ.
ಭಾವನಾತ್ಮಕ ಬೆಸುಗೆ
ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದರ್ಶಿತ್ವದ ಫಲವಾಗಿ ಸರ್ ಎಂ.ವಿಶ್ವೇಶ್ವರಯ್ಯ ಮಾರ್ಗದರ್ಶನದಂತೆ 1923ರಲ್ಲಿ ಕಾರ್ಯಾರಂಭಿಸಿದ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಉದ್ಯಮದೊಂದಿಗೆ (ವಿಐಎಸ್ಎಲ್) ರಾಜ್ಯದ ಜನರದು ಭಾವನಾತ್ಮಕ ಬೆಸುಗೆ. ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ರಾಜ್ಯದ ಮೊದಲ ಸಾರ್ವಜನಿಕ ವಲಯದ ಉದ್ಯಮ ಇದು. ವಿಶೇಷವಾಗಿ 730 ಗುಣದರ್ಜೆಯ ಉಕ್ಕು ಉತ್ಪಾದಿಸುವ ರಾಷ್ಟ್ರದ ಏಕೈಕ ಕೈಗಾರಿಕೆ ಎಂಬ ಪ್ರತಿಷ್ಠೆ ಪಡೆದಿತ್ತು. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಿರ್ಲಕ್ಷ್ಯ, ನವೀಕರಣ ನೆರವಿನಲ್ಲಿ ತಾರತಮ್ಯ, ಆಡಳಿತದ ವೈಫಲ್ಯ ಹಾಗೂ ಅವ್ಯವಹಾರದ ಸುಳಿಗೆ ಸಿಲುಕಿ, ರೋಗಗ್ರಸ್ತವೆಂಬ ಹಣೆಪಟ್ಟಿ ಕಟ್ಟಿಕೊಂಡು ಮೂಲೆಗುಂಪಾಯಿತು.
ಉದ್ಯಮಕ್ಕೆ ಬೇಕಿರುವ ಕಬ್ಬಿಣದ ಅದಿರಿಗಾಗಿ ಬಳ್ಳಾರಿಯ ಸಂಡೂರು ತಾಲೂಕಿನಲ್ಲಿ 497 ಎಕರೆ ಗಣಿ ಮೀಸಲಿಟ್ಟಿದ್ದು, ಟೌನ್ಶಿಪ್ ಜತೆಗೆ 1650 ಎಕರೆ ವಿಶಾಲ ಪ್ರದೇಶ ಹೊಂದಿದೆ. ನುರಿತ ಸಿಬ್ಬಂದಿ ಹಾಗೂ ಕಾರ್ವಿುಕ ಪಡೆ, ಸಾರಿಗೆ- ಸಂಪರ್ಕ ಸಹಿತ ಅನುಕೂಲತೆಗಳಿವೆ. ಆದರೆ ಚೇತರಿಕೆಗೆ ಅಗತ್ಯವಿದ್ದ ತಾಂತ್ರಿಕತೆ ಉನ್ನತೀಕರಣ ನೆರವು ನೀಡಲು ಕೇಂದ್ರ ಮನಸ್ಸು ಮಾಡಲಿಲ್ಲ.
ಫಲಿಸದ ಬಿಎಸ್ವೈ ಪ್ರಯತ್ನ
ಕಾರ್ಖಾನೆ ಉಳಿಸಿಕೊಳ್ಳಲೆಂದು ಬಿ.ಎಸ್. ಯಡಿಯೂರಪ್ಪ ನಡೆಸಿದ ನಿರಂತರ ಪ್ರಯತ್ನ ಫಲಿಸಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಆಗಿನ ಕೇಂದ್ರ ಸಚಿವ ಅನಂತಕುಮಾರ್ ಜತೆಗೆ ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್ರನ್ನು ಭೇಟಿಯಾಗಿದ್ದರು. ಖಾಸಗೀಕರಣ ಪ್ರಯತ್ನ ಕೈಬಿಟ್ಟು ಪುನಶ್ಚೇತನ ಕ್ರಮಕೈಗೊಳ್ಳಬೇಕೆಂದು ಮನವೊಲಿಸಿ, ಕೇಂದ್ರ ಸಚಿವರಿಂದ ಖಚಿತ ಭರವಸೆ ಪಡೆದುಕೊಂಡಿದ್ದರು. ಆದರೂ ಕೇಂದ್ರದ ನೀತಿ ಆಯೋಗ 2017ರಲ್ಲಿ ಬಂಡವಾಳ ಹಿಂತೆಗೆತಕ್ಕೆ ಶಿಫಾರಸು ಮಾಡಿತ್ತು. ಈ ವರ್ಷದ ಜನವರಿಯಲ್ಲಿ ಉಕ್ಕು ಸಚಿವ ಧಮೇಂದ್ರ ಪ್ರಧಾನ್ಗೆ ಮತ್ತೊಮ್ಮೆ ಪತ್ರ ಬರೆದಿದ್ದರು. ಖಾಸಗೀಕರಣ ಬದಲಿಗೆ ಉನ್ನತೀಕರಿಸಬೇಕೆಂದು ಮನವಿ ಮಾಡಿ, ದೇಶದ ಪ್ರತಿಷ್ಠಿತ ಲಾಭದಾಯಕ ಉದ್ಯಮವಾಗಲಿದೆ ಎಂದೂ ನಿವೇದಿಸಿಕೊಂಡಿದ್ದರು.