

ಬೆಳಗಾವಿ:ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಗುಂಡಿನ ದಾಳಿ ಘಟನೆ ಸಂಭವಿಸಿದೆ.
ಆರೋಪಿ ರಮೇಶ್ ಕಿಲಾರಿ ಎಂಬುವವನು ಸಿಪಿಸಿಇ ಶರೀಫ್ ದಫೇದಾರ್ ಮೇಲೆ ಚೂರಿಯಿಂದ ದಾಳಿ ಮಾಡಿ ಗಾಯಗೊಳಿಸಿದನು. ಈ ವೇಳೆ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದ ಸಮಯದಲ್ಲಿ ಆತ್ಮರಕ್ಷಣೆಗಾಗಿ ಕಿತ್ತೂರು ಪಿಎಸ್‌ಐ ಪ್ರವೇಣ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಇಬ್ಬರನ್ನೂ ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯ (BIMS) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಆರೋಪಿ ಈಗಾಗಲೇ 4 ದರೋಡೆ, 1 ಕಳ್ಳತನ, 1 ಸಾಮೂಹಿಕ ಅತ್ಯಾಚಾರ, 1 ಶಸ್ತ್ರಾಸ್ತ್ರ ಪ್ರಕರಣ ಹಾಗೂ ಇತರೆ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಮೇಲಿನ ಪ್ರಕರಣಗಳಲ್ಲಿ ಒಟ್ಟು 5 NBWಗಳು ಜಾರಿಯಾಗದೇ ಬಾಕಿ ಇವೆ ಎಂದು ಎಸ್ಪಿ ಡಾ.ಭೀಮಾಶಂಜರ ಗುಳೇದ ತಿಳಿಸಿದ್ದಾರೆ.