

-ಸುದ್ದಿಗೋಷ್ಠಿಯಲ್ಲಿ ವಿಜಯ ವಾದೋನಿ ಮಾಹಿತಿ
ಬೆಳಗಾವಿ: ನಗರದ ಹಿಂದವಾಡಿ ಮಹಾವೀರ ಭವನದಲ್ಲಿ ಜ.8 ರಿಂದ 10 ರವರೆಗೆ ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದು ಬೆಳಗಾವಿ ಅಂಚೆ ಅಧೀಕ್ಷ ವಿಜಯ ವಾದೋನಿ ತಿಳಿಸಿದರು.
ನಗರದ ವಾರ್ತಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಂಚೆ ಚೀಟಿ ಕುರಿತು ಅರಿವುಮೂಡಿಸುವುದು, ಹಳೆಯ ಅಂಚೆ ಚೀಟಿಗಳ ಪ್ರದರ್ಶನ ಹಮ್ಮಿಕೊಂಡಿದ್ದೇವೆ ಎಂದರು.
ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಇಕ್ಷುಪೆಕ್ಸ್ ಎಂಬ ಹೆಸರು ನಾಮಕರಣ ಮಾಡಲಾಗಿದೆ. ಈ ಪ್ರದರ್ಶನದಲ್ಲಿ ಪ್ರತಿಯೊಂದು ಅಂಚೆ ಚೀಟಿ ವಿಶೇಷತೆ ಒಳಗೊಂಡಿರುತ್ತದೆ. ಅಲ್ಲದೆ, ಅಂಚೆ ಚೀಟಿಗಳ ಮಹತ್ವ ತಿಳಿಸುವ ಕೆಲಸ ನಡೆಯಲಿದೆ. ಇತಿಹಾಸಗಳನ್ನು ಒಳಗೊಂಡಿರುವ ಹೊಸ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತಿದ್ದೇವೆ . ಎಂದರು.
ಸಂಸದರಾದ ಜಗದೀಶ್ ಶೆಟ್ಟರ್,ಪ್ರಿಯಾಂಕಾ ಜಾರಕಿಹೊಳಿ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭಾಗವಹಿಸಲಿದ್ದಾರೆ.
ಈರಣ್ಣಾಮುಚ್ಚಳಿ, ಎಂ.ಬಿ.ಶಿರೋಳ ಇತರರಿದ್ದರು.