ವಿದ್ಯಾರ್ಥಿಗಳಿಗೆ ಕಾನೂನು ಪಾಠ ಮಾಡಿದ ಪಿಎಸ್‌ಐ

1ANPP1
ಐಗಿನಬೈಲಿನ ಚನ್ನಮ್ಮಾಜಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಆನಂದಪುರ ಪಿಎಸ್‌ಐ ಯುವರಾಜ್. ಗ್ರಾಪಂ ಸದಸ್ಯ ಆನಂದ ಹರಟೆ, ಮಹಾಬಲೇಶ್ ಇತರರಿದ್ದರು.
Published on

ಆನಂದಪುರ: ಇಲ್ಲಿನ ಪಿಎಸ್‌ಐ ಯುವರಾಜ್ ಅವರು ಗುರುವಾರ ಐಗಿನಬೈಲಿನ ಚನ್ನಮ್ಮಾಜಿ ಪ್ರೌಢ ಶಾಲೆಗೆ ಭೇಟಿ ನೀಡಿ ಒಂದು ಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳಿಗೆ ಕಾನೂನು ಪಾಠ ಮಾಡಿದರು.
ಸುರಕ್ಷಿತ ಜೀವನಕ್ಕಾಗಿ ದೇಶದ ಸಾಮಾನ್ಯ ಕಾನೂನುಗಳ ವಿಧಿಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬೈಕ್ ಓಡಿಸಿದರೆ ಪಾಲಕರಿಗೆ ದಂಡ ಮತ್ತು ಕಠೀನ ಶಿಕ್ಷೆ ನೀಡಲಾಗುತ್ತಿದೆ ಎಂದರು. ಪಾಠ ಪ್ರವಚನಗಳ ವಿಷಯ ಗ್ರಹಿಕೆಗೆ ಹೊರತು ಪಡಿಸಿ ಅನ್ಯ ಕಾರ್ಯಗಳಿಗೆ ಮೊಬೈಲ್ ಬಳಸಬಾರದು. ಧೂಮ ಪಾನ, ಮದ್ಯಪಾನ, ಇಸ್ಟೀಟ್, ಗುಟ್ಖಾ ಸೇವನೆ ಇತ್ಯಾದಿಗಳ ಬಗ್ಗೆ ಹೊರಗಿನ ವ್ಯಕ್ತಿಗಳನ್ನು ಮಕ್ಕಳನ್ನು ಸುಲಭವಾಗಿ ಬಳಸಿಕೊಂಡು ದುಶ್ಚಟದ ದಾಸರನ್ನಾಗಿಸುತ್ತಾರೆ. ವಿದ್ಯಾರ್ಥಿಗಳು ಅಪರಿಚಿತರೊಂದಿಗೆ ವರ್ತಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಪಾಲಕರು ಮತ್ತು ಶಿಕ್ಷಕರು ತಿಳಿಸುವ ಜೀವನ ಮೌಲ್ಯಗಳನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಪ್ರಜೆಯಾಗಿ ಬೆಳೆದು ನಿಲ್ಲಲು ಸಾಧ್ಯ ಎಂದು ಸಲಹೆ ನೀದರು.
ಹೊಸೂರು ಗ್ರಾಪಂ ಸದಸ್ಯ ಆನಂದ ಹರಟೆ, ಚನ್ನಮ್ಮಾಜಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ, ಎಲ್ಲ ಸಹ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net