ಪಿಎಸ್​ಐ ಅಕ್ರಮ ನೇಮಕಾತಿ: ಶಾಸಕ ಪ್ರಿಯಾಂಕ್​ ನೊಟೀಸ್​ ಬಗ್ಗೆ ನಾನೇನು ಹೇಳಲ್ಲ ಅಂದ್ರು ಮಲ್ಲಿಕಾರ್ಜುನ ಖರ್ಗೆ

Kharge
Published on

ಬೀದರ್​: ಪಿಎಸ್ ಐ ಪರೀಕ್ಷೆ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಶಾಸಕ ಪ್ರಿಯಾಂಕ ಖರ್ಗೆ ನೋಟಿಸ್ ವಿಚಾರದ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಬೀದರನ ಭಾಲ್ಕಿಯಲ್ಲಿ ಮಾತನಾಡಿದ ಅವರು ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ ನಾನು ಮಾತನಾಡಿ ಆ ತನಿಖೆಯ ಮೇಲೆ ಪರಿಣಾಮ ಬೀರುವ ಕೆಲಸ ಮಾಡುವುದಿಲ್ಲ ಎಂದರು.

ಸದ್ಯ ತನಿಖೆ ನಡೆಯುತ್ತಿದೆ ನಾನು ಏನೂ ಹೇಳುವದಿಲ್ಲ.ಶಾಸಕ ಪ್ರಿಯಾಂಕ ಖರ್ಗೆಗೆ ನೋಟಿಸ್ ನೀಡಿದ್ದಾರೆ ಅವರು ಅದಕ್ಕೆ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಶ್ರೀರಾಮ ಸೇನೆಯಿಂದ ಮಂದಿರಗಳಲ್ಲಿ ಹನುಮಾನ ಚಾಲಿಸಾ ಅಭಿಯಾನ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಈ ದೃಷ್ಟಿಯಿಂದ ಈಗ ರಾಜ್ಯದಲ್ಲಿ ಇವುಗಳು ನಡೆಯುತ್ತಿವೆ.ಇಷ್ಟು ದಿನ ಈ ಬಿಜೆಪಿ ಹಾಗೂ ರಾಮಭಕ್ತರು ಎಲ್ಲಿಗೆ ಹೋಗಿದ್ರು,ಮುಸ್ಲಿಂ ಸಮುದಾಯದ ಇರಲಿ ಶೋಷಿತ ಯಾವುದೇ ಸಮುದಾಯದ ವಿರುದ್ದ ಅನ್ಯಾಯ ಅತ್ಯಾಚಾರ ದಬ್ಬಾಳಿಕೆ ನಡೆದರೆ ಕಾಂಗ್ರೆಸ್​ ಪಕ್ಷ ಮಾತನಾಡುತ್ತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net