

ಕಲಬುರಗಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಅಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಪಿಗಳ ಜಾಮೀನು ಅರ್ಜಿ ವಜಾಗೊಂಡಿದ್ದು, ಸದ್ಯಕ್ಕಂತೂ ಅವರಿಗೆ ಮುಕ್ತಿ ಇಲ್ಲ ಎಂಬಂತಾಗಿದೆ. ಕಲಬುರಗಿಯ ಜೆಎಮ್ಎಫ್ಸಿ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಎಂಬಾಕೆಯ ಪತಿ ರಾಜೇಶ್ ಹಾಗರಗಿ, ವಿರೇಶ್, ಅರುಣ್, ಪ್ರವೀಣ್, ಚೇತನ್, ಸಾವಿತ್ರಿ, ಸುಮಾ, ಸಿದ್ದಮ್ಮಾ ಎಂಬವರನ್ನು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಇನ್ನು ಆರೋಪಿಗಳಾದ ಹಯ್ಯಾಳಿ ದೇಸಾಯಿ, ರುದ್ರಗೌಡ, ವಿಶಾಲ್, ಶರಣಬಸಪ್ಪ ಅವರನ್ನು ಎಂಟು ದಿನಗಳ ಕಾಲ ಅಂದರೆ ಏ. 29ರವರೆಗೆ ಸಿಐಡಿ ಕಸ್ಟಡಿಗೆ ನೀಡಲಾಗಿದೆ.