ಎಕ್ಸ್ಲೆಂಟ್ ಇನ್ವೆಸ್ಟಿಗೇಟರ್ ಪಿಎಸ್ಐ ಅನಿಲಕುಮಾರ ನಿವೃತ್ತಿ

IMG-20230831-WA0073.jpg
Published on

ಬೆಳಗಾವಿ : ಪೊಲೀಸ್ ಇಲಾಖೆಗೆ ಸವಾಲು ಎಂಬಂತಾಗಿದ್ದ ಅತ್ಯಂತ ಕ್ಲಿಷ್ಠ ಪ್ರಕರಣಗಳನ್ನೂ ಚಾಣಾಕ್ಷತೆಯಿಂದ ಭೇದಿಸುವ ಮೂಲಕ ಜನಪ್ರಿಯತೆ ಗಳಿಸಿರುವ ಅತ್ಯತ್ತಮ ತನಿಖಾಧಿಕಾರಿಯಾಗಿ ಹೆಸರಾಗಿರುವ ಪಿಎಸ್‌ಐ ಅನಿಲ ಕುಮಾರ್ ಅಮ್ಮಿನಬಾವಿ ಅವರು ಗುರುವಾರ ನಿವೃತ್ತರಾದರು.

ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ನಿವಾಸಿಯಾಗಿರುವ ಅನಿಲಕುಮಾರ್ ತಿಪ್ಪಣ್ಣ ಅಮ್ಮಿನಬಾವಿ ಅವರು, ತಮ್ಮ 21ನೇ ವಯಸ್ಸಿನಲ್ಲಿ 1984ರ ಜ.25ರಂದು ಪೇದೆಯಾಗಿ ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಸೇರಿದ್ದರು. ಚಿಕ್ಕೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲಕುಮಾರ ಚಿಕ್ಕೋಡಿ ಅವರು ಸಹಾಯಕ ತನಿಖೆ ಮಾಡಿದ ಎಂಟು ಪ್ರಕರಣಗಳು ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪಠ್ಯವಾಗಿ ಬೋಧಿಸಲಾಗಿದೆ.ಮೊದಲಿನಿಂದಲೂ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದ ಅವರು, ಜಿಲ್ಲೆಯ 13 ಪೊಲೀಸ್ ಠಾಣೆಗಳಲ್ಲಿ ಒಟ್ಟು 39 ವರ್ಷ 8 ಎಂಟು ತಿಂಗಳಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net