

ಕೂಡಲಸಂಗಮ: ಕೀರ್ತನೆಗಳ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಕನಕದಾಸರ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ. ವಿದ್ಯಾರ್ಥಿಗಳು ಕನಕದಾಸರ ಬದುಕು, ಕೀರ್ತನೆಗಳನ್ನು ಅಧ್ಯಯನ ಮಾಡಬೇಕು ಎಂದು ಶಿಕ್ಷಕ ಶಿದ್ದನಗೌಡ ಪಾಟೀಲ ಹೇಳಿದರು.
ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ, ಸಾಮರಸ್ಯ ಮೂಡಿಸುವಲ್ಲಿ ಅವರ ಕೀರ್ತನೆಗಳು ಮಹತ್ವದ ಸ್ಥಾನ ಪಡೆದಿವೆ ಎಂದರು. ಶಿಕ್ಷಕರಾದ ಡಿ.ಬಿ.ನದಾಫ್, ಎಚ್.ಕೆ.ಪುರಂದ, ಎಸ್.ಎಸ್.ಕಟ್ಟಿಮನಿ, ಎಸ್.ವಿ.ಕಂಠಿ, ಇಜಾಜ ವಾಲಿಕಾರ ಮುಂತಾದವರು ಇದ್ದರು.
ಬಿಸಲದಿನ್ನಿ : ಬಿಸಲದಿನ್ನಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕನಕದಾಸ ಜಯಂತಿ ಸಮಾರಂಭ ನಡೆಯಿತು. ಗ್ರಾಮದ ಹಿರಿಯ ಮುಖಂಡ ಭೀಮಶಿ ಯರಝರಿ, ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿ ಎಚ್.ಎ.ವಕ್ರ ಕನಕದಾಸ ಜೀವನ, ಸಾಧನೆ ಕುರಿತು ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.