ಗೋಕರ್ಣ ರೈಲು ನಿಲ್ದಾಣದಲ್ಲಿ ಜೂ.೧ ರಿಂದ ಪಿಆರ್‌ಎಸ್‌ ಸೇವೆ ಆರಂಭ

Gokarna Railway station
Published on

ಕಾರವಾರ: ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ಮುಂಗಡ ಟಿಕೆಟ್ ಬುಕ್ಕಿಂಗ್ (ಪಿಆರ್‌ಎಸ್) ಸೇವೆ ಪ್ರಾರಂಭವಾಗಲಿದೆ.

ಜೂನ್ 1 ರಿಂದ ಈ ವ್ಯವಸ್ಥೆ ಶುರುವಾಗಲಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆದಿರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಕೊಂಕಣ ರೈಲ್ವೆ 18 ನಿಲ್ದಾಣಗಳಲ್ಲಿ ಈಗಾಗಲೇ ಪಿಆರ್‌ಎಸ್ ವ್ಯವಸ್ಥೆ ಇದೆ. ಅದರಲ್ಲಿ ಕರ್ನಾಟಕದ ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾರೋಡ್ ಬೈಂದೂರ್, ಭಟ್ಕಳ, ಕುಮಟಾ, ಕಾರವಾರಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡುವ ಕೌಂಟರ್ ಇದೆ ಎಂದು ಕೆಆರ್‌ಎಸ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net