ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸುವೆ

MDG mla
ಮೂಡಿಗೆರೆ ಡಿಎಸ್‌ಬಿಜಿ ಕಾಲೇಜು ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕಿ ನಯನಾ ಮೋಟಮ್ಮ ದ ಭೂಮಿ ಪೂಜೆ ನೆರವೇರಿಸಿದರು. ಹೊಸ್ಕೆರೆ ರಮೇಶ್, ಉದಯಕುಮಾರ್, ದಯಾನಂದ್, ಗೀತಾ ಇತರರಿದ್ದರು.
Published on

ಮೂಡಿಗೆರೆ: ಶಿಕ್ಷಣ ಸಂಸ್ಥೆಗಳಿಗೆ ಸುಸಜ್ಜಿತ ಕಟ್ಟಡ ಹಾಗೂ ಕಲಿಕೆಗೆ ಪೂರಕ ವಾತಾವರಣ ದೊರೆತಾಗ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಗೊಳ್ಳಲು ಸಾಧ್ಯ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹೆಚ್ಚಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಡಿಎಸ್‌ಬಿಜಿ ಕಾಲೇಜು ಅತ್ಯಂತ ಪ್ರಯೋಜನಕಾರಿಯಾಗಿದೆ. ಕಾಲೇಜಿನಲ್ಲಿ ಪ.ಜಾ, ಪ.ಪಂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಹಾಗೂ ಹಿಂದಿನ ಶಾಸಕರ ಶ್ರಮದಿಂದ ಇಲ್ಲಿ ನೂತನ ಕಟ್ಟಡ ನಿರ್ಮಿಸಲು ಎಸ್‌ಇಪಿ, ಟಿಎಸ್‌ಪಿಯಿಂದ 4.8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಮೋಟಮ್ಮ ಅವರ ಆಡಳಿತದಲ್ಲಿ ನಿರ್ಮಿಸಿದ ಅನೇಕ ಶಾಲೆಗಳಲ್ಲಿ ಈಗಲೂ ಕಲಿಕಾ ವ್ಯವಸ್ಥೆಗೆ ಪೂರಕ ವಾತಾವರಣವಿರುವುದರಿಂದ ಪಾಲಕರು ಮಕ್ಕಳನ್ನು ಸಂತಸದಿಂದ ಶಾಲೆಗೆ ಕಳಹಿಸುತ್ತಾರೆ. ಈ ನಿಟ್ಟಿನಲ್ಲಿ ಡಿಎಸ್‌ಬಿಜಿ ಕಾಲೇಜು ಕೂಡ ಜ್ಞಾನ ದೇಗುಲವಾಗುವಂತೆ ನೋಡಿಕೊಳ್ಳಬೇಕು. ಉಪನ್ಯಾಸಕರ ವೇತನಕ್ಕಾಗಿ ಕಾಲೇಜು ಸಮಿತಿ ರಚನೆ ಸಮಸ್ಯೆ ಶೀಘ್ರದಲ್ಲಿಯೇ ಇತ್ಯರ್ಥಪಡಿಸುತ್ತೇನೆ. ಕಾಂಪೌಂಡ್ ನಿರ್ಮಿಸಲು ಅನುದಾನ ಕೊಡುವುದಾಗಿ ಭರವಸೆ ನೀಡಿದರು.
ಪಪಂ ಸದಸ್ಯ ಹೊಸ್ಕೆರೆ ರಮೇಶ್, ಕಾಲೇಜು ಪ್ರಾಚಾರ್ಯ ಉದಯಕುಮಾರ್, ಉಪನ್ಯಾಸಕ ದಯಾನಂದ್, ಕರ್ನಾಟಕ ಗೃಹ ಮಂಡಳಿ ಇಲಾಖೆ ಎಇಇ ಗೀತಾ, ಸಂಪತ್ ಬಿಳಗುಳ, ಸಿ.ಬಿ.ಶಂಕರ್, ಲವಕುಮಾರ್, ಹರೀಶ್, ಬಾಳೂರು ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net