

ಬೆಂಗಳೂರು: ನಗರದಲ್ಲಿ ಸ್ವಂತ ಮನೆ ಹೊಂದುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ, ಇಚ್ಚೆಗೆ ಅನುಗುಣವಾದ ಮನೆಗಳು ಸಿಗುವುದಿಲ್ಲ. ಇದೀಗ, ಸ್ವಂತ ಮನೆ ಹೊಂದಲು ತುದಿಗಾಲಲ್ಲಿ ನಿಂತಿರುವವರಿಗಾಗಿ ‘ಪ್ರಾವಿಡೆಂಟ್’ ರಿಯಲ್ಎಸ್ಟೇಟ್ ಕಂಪನಿ ಮೈಸೂರು ರಸ್ತೆಯ ಎಂ.ಆರ್. ಕನ್ವೆನ್ಷನ್ ಹಾಲ್ನಲ್ಲಿ ಫೆ.2ರವರೆಗೆ ‘ಬೆಂಗಳೂರು ಹೋಮ್ ಹಬ್ಬ’ ಆಯೋಜಿಸಿದೆ. ಹಲವು ರಿಯಾಯಿತಿ ದರದಲ್ಲಿ ಫ್ಲ್ಯಾಟ್ಗಳನ್ನು ನೀಡಲಾಗುತ್ತಿದೆ.
ಮೇಯರ್ ಚಾಲನೆ: ‘ಬೆಂಗಳೂರು ಹೋಮ್ ಹಬ್ಬ’ 10ನೇ ಆವೃತ್ತಿಯ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮೇಯರ್ ಗೌತಮ್ುಮಾರ್ ಶುಕ್ರವಾರ ಚಾಲನೆ ನೀಡಿದರು. ಬಳಿಕ ಪ್ರದರ್ಶನಕ್ಕೆ ಬಂದ ಗ್ರಾಹಕರು, ‘ಪ್ರಾವಿಡೆಂಟ್’ನ ಹಲವು ಹೊಸ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಮೈಸೂರು ರಸ್ತೆ ಬಳಿ ಇಕ್ವಿನಾಕ್ಸ್: ಮೈಸೂರು ರಸ್ತೆಯ ನೈಸ್ ರಸ್ತೆ ಜಂಕ್ಷನ್ ಬಳಿ ‘ಇಕ್ವಿನಾಕ್ಸ್’ ಪ್ರಾಜೆಕ್ಟ್ನಲ್ಲಿ ಸುಸಜ್ಜಿತ ಸೌಲಭ್ಯವುಳ್ಳ ಹಲವು ಫ್ಲ್ಯಾಟ್ಗಳನ್ನು ನೀಡಲಾಗುತ್ತಿದೆ. ಕ್ಲಬ್ಹೌಸ್, ಟೆನಿಸ್ ಕೋರ್ಟ್, ಬಾಸ್ಕೆಟ್ಬಾಲ್ ಕೋರ್ಟ್, ಕ್ರಿಕೆಟ್ ಪಿಚ್, ಸ್ವಿಮ್ಮಿಂಗ್ಪೂಲ್, ಸ್ಕೇಟಿಂಗ್ ರಿಂಕ್ ಸೇರಿ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಜತೆಗೆ ಸುತ್ತಮುತ್ತ ಸಾಕಷ್ಟು ಮರಗಿಡಗಳು ಇದ್ದು, ಹಸಿರಿನಿಂದ ಕೂಡಿದೆ ಎಂದು ಪ್ರಾವಿಡೆಂಟ್ ಕಂಪನಿ ಸೇಲ್ಸ್ ಮ್ಯಾನೇಜರ್ ನವನೀತ್ ತಿಳಿಸಿದ್ದಾರೆ.
ಸುಂಕದಕಟ್ಟೆಯಲ್ಲಿ ‘ಪ್ರಾವಿಡೆಂಟ್ ಟ್ರೀ’: ಮಾಗಡಿ ರಸ್ತೆ ಸುಂಕದಕಟ್ಟೆ ಬಳಿ 6 ಎಕರೆ ಪ್ರದೇಶದಲ್ಲಿ ‘ಪ್ರಾವಿಡೆಂಟ್ ಟ್ರೀ’ ಪ್ರಾಜೆಕ್ಟ್ನಲ್ಲಿ 560 ಫ್ಲ್ಯಾಟ್ಗಳು ಮಾರಾಟಕ್ಕಿವೆ. ಇಲ್ಲಿ 330ಕ್ಕೂ ಹೆಚ್ಚು ಗಿಡಮರಗಳಿದ್ದು, ಆಹ್ಲಾದಕರ ವಾತಾವರಣದಲ್ಲಿ ವಾಸಿಸಬಹುದು. ಸುಸಜ್ಜಿತ ವಾಹನ ರ್ಪಾಂಗ್ ವ್ಯವಸ್ಥೆ, ಸೂಪರ್ವಾರ್ಕೆಟ್, ಕ್ಲಬ್ಹೌಸ್, ಸ್ವಿಮ್ಮಿಂಗ್ಪೂಲ್ ಕೂಡ ಇಲ್ಲಿದೆ.
ಸಂಪಿಗೆಹಳ್ಳಿ ಬಳಿ 249 ಫ್ಲ್ಯಾಟ್ಗಳು: ಧಣಿಸಂದ್ರದ ಸಂಪಿಗೆಹಳ್ಳಿ ಮುಖ್ಯ ರಸ್ತೆ ಬಳಿ 2 ಎಕರೆ 3 ಗುಂಟೆ ಪ್ರದೇಶದಲ್ಲಿ 249 ಫ್ಲ್ಯಾಟ್ಗಳನ್ನು ಮಾರಾಟ ಮಾಡುತ್ತಿದೆ. ಮಾನ್ಯತಾ ಟೆಕ್ಪಾರ್ಕ್ ಸಮೀಪದಲ್ಲಿರುವ ಈ ಅಪಾರ್ಟ್ ಮೆಂಟ್ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆಗೊಳಿಸಲಾಗಿದೆ. ಸ್ವಿಮ್ಮಿಂಗ್ ಪೂಲ್, ಕಿಡ್ಸ್ ಏರಿಯಾ, ಮೆಡಿಟೇಶನ್ ಸೆಂಟರ್ ಸೇರಿ ಹಲವು ಸೌಲಭ್ಯಗಳು ಇಲ್ಲಿವೆ.
ಹಬ್ಬದ ವಿಶೇಷ ಕೊಡುಗೆ!
ಮೂರು ದಿನಗಳ ಬೆಂಗಳೂರು ಹೋಮ್ ಹಬ್ಬದಲ್ಲಿ ಫ್ಲ್ಯಾಟ್ ಖರೀದಿಸುವ ಗ್ರಾಹಕರಿಗೆ 12 ಲಕ್ಷ ರೂ.ವರೆಗೆ ಉಳಿತಾಯವಾಗಲಿದೆ. ವಿಶೇಷ ಮೇಳದಲ್ಲಿ ಫ್ಲ್ಯಾಟ್ ಖರೀದಿಸಿದರೆ ಸ್ಪೈನ್ ಆಂಡ್ ವಿನ್ ಮೂಲಕ ಗೋಲ್ಡ್ ವೋಚರ್, ಒನ್ ಪ್ಲಸ್ 7 ಮೊಬೈಲ್, ಹಾಲಿಡೇ ವೋಚರ್ ಅನ್ನು ಗೆಲ್ಲ ಬಹುದು. ಸ್ಪಾಟ್ ಬುಕ್ಕಿಂಗ್ ಮಾಡಿದರೆ ಇನ್ನೂ ಹೆಚ್ಚಿನ ರಿಯಾಯ್ತಿಗಳನ್ನು ನೀಡಲಾಗುವುದು ಎಂದು ಪ್ರಾವಿಡೆಂಟ್ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ದ್ರುಬಾ ಘೋಷ್ ಮಾಹಿತಿ ನೀಡಿದ್ದಾರೆ.
ಪ್ರಾವಿಡೆಂಟ್ ಕಂಪನಿ ಆಯೋಜಿಸಿರುವ ಬೆಂಗಳೂರು ಹೋಮ್ ಹಬ್ಬದಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಮನೆ ಖರೀದಿಸಬಹುದು. ಇಂತಹ ಕಾರ್ಯಕ್ರಮದಿಂದ ತಮ್ಮಿಷ್ಟದ ಮನೆಗಳಿಗಾಗಿ ಹುಡುಕಾಡುತ್ತಿರುವವರಿಗೆ ಸಾಕಷ್ಟು ಅನುಕೂಲವಾಗುತ್ತದೆ. | ಗೌತಮ್ ಕುಮಾರ್ ಮೇಯರ್