ಮನರೇಗಾ ಯೋಜನೆಯಡಿ ಕೆಲಸ ಒದಗಿಸಿ

Provide work under the MNREGA scheme
ಚಿಕ್ಕಸಂಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಕಾಮಗಾರಿಗೆ ಶಾಸಕ ಜೆ.ಟಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಸಂಗೀತಾ ನಾಯಕ, ಶಿವಾನಂದ ವೆಂ. ಸಾಲಾಪುರ, ಪಾಂಡು ಪೊಲೀಸ್, ತಿಮ್ಮಣ್ಣ ವೆಂ. ರೊಳ್ಳಿ, ವಿಠಲ ನ್ಯಾಮಗೌಡ,ನಾರಾಯಣ ಹಾದಿಮನಿ, ಮಲ್ಲಣ್ಣ ಮುಧೋಳ, ಗೋವಿಂದಗೌಡ ಪಾಟೀಲ ಮತ್ತಿತರರಿದ್ದರು.
Published on

ಕಲಾದಗಿ: ನನ್ನ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಪಂಚಾಯಿತಿಗಳು ಮನರೇಗಾ ಯೋಜನೆಯಡಿ ಕನಿಷ್ಠ ನೂರು ದಿನ ಕೆಲಸ ಒದಗಿಸುವ ಕಾರ್ಯ15ರೊಳಗೆ ಆರಂಭವಾಗಬೇಕು. ಈ ವಿಚಾರದಲ್ಲಿ ನಿರ್ಲಕ್ಷೃವಹಿಸುವ ಪಿಡಿಓಗಳನ್ನು ವರ್ಗಾಯಿಸಬೇಕಾಗುತ್ತದೆ ಎಂದು ಶಾಸಕ ಜೆ.ಟಿ. ಪಾಟೀಲ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಮಿನರಲ್ಸ್ ಕಾರ್ಪೋರೇಶನ್ ಲಿ. ಅಧ್ಯಕ್ಷ ಜಿ.ಎಸ್.ಪಾಟೀಲ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಚಿಕ್ಕಸಂಶಿ ಗ್ರಾಮದ ಸರ್ಕಾರಿ ಶಾಲೆಯ ನೂತನ ಕೊಠಡಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮನರೇಗಾ ಯೋಜನೆ ಮೂಲಕ ಜಾನುವಾರು ಶೆಡ್ ನಿರ್ಮಾಣ, ಹೊಲದ ಬದು ನಿರ್ಮಾಣ ಮಾಡಬೇಕು. ಚರಂಡಿ, ಶುದ್ಧ ನೀರಿನ ಘಟಕಗಳು ಸುಸ್ಥಿತಿಯಲ್ಲಿರಬೇಕು ಎಂದು ದೇವನಾಳ ಗ್ರಾಪಂ ಪಿಡಿಒ ಸಂಗೀತಾ ನಾಯಕ ಅವರಿಗೆ ಸೂಚನೆ ನೀಡಿದರು.

ಗ್ರಾಪಂ ಸದಸ್ಯ ಶಿವಾನಂದ ವೆಂ. ಸಾಲಾಪುರ, ಮುಖಂಡರಾದ ಪಾಂಡು ಪೊಲೀಸ್, ತಿಮ್ಮಣ್ಣ ವೆಂ. ರೊಳ್ಳಿ, ವಿಠಲ ನ್ಯಾಮಗೌಡ,ನಾರಾಯಣ ಹಾದಿಮನಿ, ಮಲ್ಲಣ್ಣ ಮುಧೋಳ, ಗೋವಿಂದಗೌಡ ಪಾಟೀಲ, ಕೃಷ್ಣ ಪತ್ತಾರ, ತಿಮ್ಮನಗೌಡ ಬಿ. ಪಾಟೀಲ, ವೆಂಕಟೇಶ ಯ. ಸಾಲಾಪುರ, ರಮೇಶ ಕೃಷ್ಣಪ್ಪನವರ, ಅಶೋಕ ಪಾಟೀಲ, ಆನಂದ ಪಾಟೀಲ, ಬಿಇಒ ಎಂ.ಎಸ್. ಬಡದಾನಿ, ಅಕ್ಷರದಾಸೋಹ ಯೋಜನೆಯ ತಾಲೂಕಾಧಿಕಾರಿ ನಾಗರಾಜ ದೇಶಪಾಂಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net