ಮನೆಗಳ ಮುಂದ ಪ್ರಾಣಿ, ಪಕ್ಷಿಗಳಿಗೆ ನೀರಿಡಿ

bbgd aravtige
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಸ್ಥಾನ ಮುಂದೆ ವಿವೇಕ ಬ್ರಿಗೇಡ್ ಸಂಸ್ಥೆಯಿಂದ ಪ್ರಾಣಿ ಪಕ್ಷಿಗಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟಿಗೆಗೆ ಸಿದ್ಧಲಿಂಗ ಶ್ರೀಗಳು ಚಾಲನೆ ನೀಡಿದರು. ವಿನೂತ ಕಲ್ಲೂರ, ಪುರಸಭೆ ಅಧ್ಯಕ್ಷ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ ಇತರರಿದ್ದರು.
Published on

ಬಸವನಬಾಗೇವಾಡಿ: ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ, ಬಡಾವಣೆ, ನಗರಗಳಲ್ಲಿ ಪ್ರಾಣಿ, ಪಕ್ಷಿ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನ ಮುಂದೆ ವಿವೇಕ ಬ್ರಿಗೇಡ್ ಸಂಸ್ಥೆಯಿಂದ ಭಾನುವಾರ ಪ್ರಾಣಿ ಪಕ್ಷಿಗಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಅತಿ ಮಳೆಯಾಗಿ ಕೆರೆಕಟ್ಟೆ ಹಳ್ಳಕೊಳ್ಳದಲ್ಲಿ ನೀರು ಹರಿಯುತ್ತಿತ್ತು. ಆದರೆ ಇಂದು ಮನುಷ್ಯನ ದುರಾಸೆಯಿಂದ ಪರಿಸರ ಹಾನಿಯಾಗಿ ಮಳೆ ಕಡಿಮೆಯಾಗಿದೆ. ಹೀಗಾಗಿ ಪ್ರಾಣಿ-ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಆದ್ದರಿಂದ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ತಮ್ಮ ತಮ್ಮ ಗಲ್ಲಿ, ಒಟಾರ, ಓಣಿ, ನಗರ, ಬಡಾವಣೆಗಳು ಮನೆಗಳ ಮುಂದೆ ಹಾಗೂ ಜನದಟ್ಟನೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕಾರ್ಯವಾಗಬೇಕೆಂದು ತಿಳಿಸಿದರು.

ವಿವೇಕ ಬ್ರಿಗೇಡ ಮುಖ್ಯಸ್ಥ ವಿನೂತ ಕಲ್ಲೂರ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆ ವತಿಯಿಂದ ಸಕಲ ಪ್ರಾಣಿ ಪಕ್ಷಿಗಳಿಗೆ ದವಸ ಧಾನ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಹಾರಿವಾಳ, ರವಿಗೌಡ ಚಿಕ್ಕೊಂಡ, ಡಾ. ಬಸವರಾಜ ಕೋಟಿ, ಮಣಿಕಂಠ ಕಲ್ಲೂರ, ಶಿವಾನಂದ ತೋಳನೂರ, ಸಿದ್ದು ಬೆನ್ನೂರ, ಮಹೇಂದ್ರ ಕುಮಾರ, ಸತೀಶ ಕ್ವಾಟಿ, ಪ್ರಾಣೇಶ ಹೂಗಾರ, ಅಮರ ಗಾಯಕವಾಡ, ಸಿದ್ದು ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net