

ಮುದ್ದೇಬಿಹಾಳ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯ, ಹಿರಿಯ ಶಾಸಕ ಸಿ.ಎಸ್. ನಾಡಗೌಡ ಅವರು ಪ್ರಸ್ತುತ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಮತೇತ್ರದ ನೀರಾವರಿ ಮತ್ತು ತಾಲೂಕು ಕೇಂದ್ರವಾಗಿರುವ ತಾಳಿಕೋಟೆಗೆ ಸರ್ಕಾರದ ಸೌಲಭ್ಯಗಳ ಒದಗಿಸುವಿಕೆ ಹಾಗೂ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಾರಸು ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಗಮನ ಸೆಳೆದಿದ್ದಾರೆ.
ಜಮೀನುಗಳಿಗೆ ನೀರು ಹರಿಸುವ ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಿಗೆ ಪ್ರಶ್ನೆ ಕೇಳಿರುವ ಅವರು, ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆಗಳಿಂದ ರೆತರ ಜಮೀನುಗಳಿಗೆ ನೀರು ಹರಿಸಲು ಸರ್ಕಾರ ಅನುಸರಿಸುತ್ತಿರುವ ನಿಯಮಗಳು, ಇಲಾಖೆಯ ವ್ಯಾಪ್ತಿಯ ಕೆರೆಗಳ ಸಂಖ್ಯೆ (ವಿಜಯಪುರ ಜಿಲ್ಲೆಯ ಮತೇತ್ರವಾರು ಕೆರೆಗಳ ಸಂಖ್ಯೆ ಸೇರಿ), ಇಲಾಖೆಯಿಂದ ವಿಜಯಪುರ ಜಿಲ್ಲೆಗೆ ಕಳೆದ 3 ವರ್ಷಗಳಿಂದ ಹಂಚಿಕೆಯಾಗಿರುವ, ಬಿಡುಗಡೆಯಾಗಿರುವ ಹಣವೆಷ್ಟು?, ಇಲಾಖಾ ಕೆರೆಗಳಿಂದ ನೀರಾವರಿ ಸೌಕರ್ಯ ಹೊಂದಿರುವ ರೆತಾಪಿ ವರ್ಗದವರಿಗೆ ಬೇಡಿಕೆಗನುಗುಣವಾಗಿ ಕಷಿಗೆ ನೀರು ಒದಗಿಸಿಕೊಡಲು ಸರ್ಕಾರದ ಕ್ರಮಗಳೇನು? ಎನ್ನುವ ಮಾಹಿತಿ ನೀಡುವಂತೆ ಕೇಳಿದ್ದಾರೆ.
ಕಂದಾಯ ಸಚಿವ ಕಷ್ಣ ಭೆರೇಗೌಡರಿಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿರುವ ಅವರು, ತಾಳಿಕೋಟೆ ಹೊಸ ತಾಲೂಕು ಕೇಂದ್ರವಾಗಿ ರಚನೆಯಾದ ನಂತರ ಆಡಳಿತ ಸೌಧ (ಮಿನಿ ವಿಧಾನಸೌಧ) ನಿರ್ಮಾಣ ಯಾವಾಗ?, ಹೊಸ ತಾಲೂಕು ಕಚೇರಿಗಳನ್ನು ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಗಮನಕ್ಕೆ ಬಂದಿದೆಯೇ?, ಬಂದಿದ್ದಲ್ಲಿ ಯಾವಾಗ ಪ್ರಾರಂಭಿಸಲಾಗುವುದು? ಹಾಗಿದ್ದಲ್ಲಿ ಎಂದಿನಿಂದ ಕಚೇರಿಗಳನ್ನು ಪ್ರಾರಂಭಿಸಲಾಗುತ್ತದೆ ಮತ್ತು ಈ ಬಗ್ಗೆ ಸರ್ಕಾರ ಕೆಕೊಂಡಿರುವ ಕ್ರಮಗಳ ವಿವರ ನೀಡುವಂತೆ ಕೇಳಿದ್ದಾರೆ.
ಇದಕ್ಕುತ್ತರಿಸಿರುವ ಸಚಿವರು ತಾಲೂಕು ಆಡಳಿತ ಸೌಧ ನಿರ್ಮಿಸಲು ಕರ್ನಾಟಕ ಹೌಸಿಂಗ್ ಬೋರ್ಡಗೆ ಸೇರಿರುವ ತಾಳಿಕೋಟೆ ಪಟ್ಟಣದ ರಿಸನಂಬರ್ 164/*3ರಲ್ಲಿ 6&01 ಎಕರೆ ಜಮೀನು ಪೆಕಿ 5 ಎಕರೆ ಜಮೀನು ಗುರ್ತಿಸಿದ್ದು ಪ್ರತಿ ಎಕರೆಗೆ ರೂ. 14,54,549 ರಂತೆ ಒಟ್ಟು ರೂ. 72,72,745 ಹಣವನ್ನು ಪಾವತಿ ಮಾಡಿ ನಂತರ ಜಮೀನು ಪಡೆಯಬೇಕಿದ್ದು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿತ್ತು.
ಆದರೆ ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನು ಮುಂದೂಡುವಂತೆ ತಿಳಿಸಿದೆ. ಹೊಸದಾಗಿ ತಾಲೂಕು ಆಡಳಿತ ಸೌಧ ಕಟ್ಟಡ ನಿರ್ಮಿಸಲು ಜಮೀನು ಖರೀದಿಗೆ ಆರ್ಥಿಕ ಇಲಾಖೆಯ ಸಹಮತಿಯನ್ನು ಮತ್ತೊಮ್ಮೆ ಕೋರಲಾಗುತ್ತದೆ. ಆರ್ಥಿಕ ಇಲಾಖೆ ಸಹಮತಿ ನೀಡಿದಲ್ಲಿ ಜಿಲ್ಲಾಕಾರಿಯವರಿಂದ ಪ್ರಸ್ತಾವನೆ ಪಡೆದು ತಾಲೂಕು ಆಡಳಿತ ಸೌಧ ನಿರ್ಮಿಸಲು ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈಚೆಗೆ ಸರ್ಕಾರಿ ನೌಕರರ ತಾಲೂಕು ಟಕದ ಪದಾಕಾರಿಗಳು, ಸದಸ್ಯರು ಶಾಸಕರ ಗಹ ಕಚೇರಿಗೆ ತೆರಳಿ 7ನೇ ವೇತನ ಆಯೋಗದ ಶಿಾರಸುಗಳ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿದ್ದರು. ಅವರ ಕೋರಿಕೆ ಮನ್ನಿಸಿ ಶಾಸಕರು ಈ ಕುರಿತು ಮುಖ್ಯಮಂತ್ರಿಯವರಿಗೆ ಪ್ರಶ್ನೆ ಕೇಳಿದ್ದು 7ನೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರೆ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸದೆ ಕೂಡಲೇ ಜಾರಿ ಮಾಡುವುದೇ? ಜಾರಿ ಮಾಡುವುದಾದಲ್ಲಿ ಈಗಾಗಲೇ ನೀಡಿರುವ ಶೇ. 17ರಷ್ಟು ಮಧ್ಯಂತರ ಪರಿಹಾರದೊಂದಿಗೆ ಆಯೋಗದ ವರದಿಯಲ್ಲಿ ತಿಳಿಸಿರುವ ಶೇ. 27.5ರಂತೆ ಜಾರಿಗೊಳಿಸಲಾಗುವುದೇ? ಹಾಗಿದ್ದಲ್ಲಿ ಎಂದಿನಿಂದ ಜಾರಿ ಮಾಡಲಾಗುತ್ತದೆ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಮುಖ್ಯಮಂತ್ರಿಯವರು ಇನ್ನೂ ಉತ್ತರ ನೀಡಿಲ್ಲ.