ರಾಷ್ಟ್ರ ನಿಮಾರ್ಣಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ

17 10 2025_BGR_RURAL-PAGE_07
ದೊಡ್ಡಬಳ್ಳಾಪುರದ ಬೆಸೆಂಟ್​ ಪಾರ್ಕ್​ನಲ್ಲಿ ಭಾರತ್​ ಸ್ಕೌಟ್ಸ್​&ಗೈಡ್ಸ್​ನಿಂದ ಆಯೋಜಿಸಿದ್ದ ಯುವ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸ್ಕೌಟ್ಸ್​&ಗೈಡ್ಸ್​ ಆಯುಕ್ತ ಪಿ.ಜಿ.ಆರ್​.ಸಿಂಧ್ಯಾ ಇದ್ದರು.
Published on

ದೊಡ್ಡಬಳ್ಳಾಪುರ : ದೇಶದ ಉಳಿವಿಗಾಗಿ ವಿದ್ಯಾರ್ಥಿಗಳು ತರಬೇತಿ ಪಡೆದರೆ ವಿಪತ್ತು ಸಂಭವಿಸಿದಾಗ ಸಹಕಾರಿಯಾಗಲಿದೆ. ರಾಷ್ಟ್ರ ನಿಮಾರ್ಣ ಕಾರ್ಯದಲ್ಲಿ ವಿದ್ಯಾರ್ಥಿಗಳು ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹೇಳಿದರು.

ನಗರದ ಬೆಸೆಂಟ್​ ಪಾರ್ಕ್​ನಲ್ಲಿ ಭಾರತ್​ ಸ್ಕೌಟ್ಸ್​&ಗೈಡ್ಸ್​ನಿಂದ ಬುಧವಾರ ಯುವ ಅಪಾಯ ಮಿತ್ರ ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಯುವ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಶಿಬಿರದಲ್ಲಿ ಮಾತನಾಡಿದರು.

ವಿವಿಧ ನೈಸರ್ಗಿಕ ವಿಕೋಪಗಳಿಂದ ದೇಶ ಹಾನಿಗೊಳಗಾದಾಗ ವಿಪತ್ತು ನಿರ್ವಹಣಾ ತಂಡವು ತಕ್ಷಣ ನೆರವಿಗೆ ಬರುತ್ತದೆ. ಏಳು ದಿನಗಳ ಕಾಲ ನಡೆಯುವ ಈ ತರಬೇತಿ ಶಿಬಿರದಲ್ಲಿ ಪ್ರತಿನಿತ್ಯ ಭೂಕಂಪ, ಅಗ್ನಿ ಅನಾಹುತ, ಪ್ರವಾಹಗಳಲ್ಲಿ ಜನರನ್ನು ರಕ್ಷಣೆ ಮಾಡುವ ವಿಧಾನ ತಿಳಿಸಲಾಗುತ್ತದೆ. ಅಲ್ಲದೇ ಮಕ್ಕಳಲ್ಲಿ ದೇಶಭಿಮಾನ, ರಾಷ್ಟ್ರೀಯತೆ ಜತೆಗೆ ರಾಷ್ಟ್ರ ನಿಮಾರ್ಣದ ಪರಿಕಲ್ಪನೆ ಬೆಳೆಸಲಾಗುವುದು. ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಶಿಸ್ತು ಹಾಗೂ ನಾಯಕತ್ವದ ಗುಣ ಬೆಳೆಯುತ್ತವೆ. ತರಬೇತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ನೂರಾರು ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ವಿಶೇಷ. ಉತ್ತಮ ಜೀವನ ಶೈಲಿಗೆ ಇಂತಹ ತರಬೇತಿಗಳು ಅವಶ್ಯಕ ಎಂದರು.

ಅರಿವು ಅಗತ್ಯ : ಸ್ಥಳಿಯವಾಗಿ ಯಾವುದೇ ನೈಸರ್ಗಿಕ ವಿಪತ್ತುಗಳ ಸಮಸ್ಯೆ ಇಲ್ಲದೆ ನಾವು, ನೀವು ಸುರಕ್ಷಿತವಾಗಿದ್ದೇವೆ. ಆದರೆ ಜಮ್ಮು ಕಾಶ್ಮೀರ, ಉತ್ತರಾಖಂಡಗಳಲ್ಲಿ ಹೆಚ್ಚು ವಿಪತ್ತು ಸಂಭವಿಸುತ್ತದೆ. ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಆಪತ್ತು ಎದುರಾಗುವ ಸಾಧ್ಯತೆ ಹೆಚ್ಚು. ಅಂತಹ ಸಮಯದಲ್ಲಿ ವಿಪತ್ತು ನಿರ್ವಹಣಾ ತಂಡಗಳ ಅವಶ್ಯಕತೆ ಇರುತ್ತದೆ. ಇಂತಹ ತರಬೇತಿಗಳಲ್ಲಿ ಕೃಷಿ ಹೊಂಡಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.

ತರಬೇತಿಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನೈಸರ್ಗಿಕ ವಿಪತ್ತು ನಿರ್ವಹಣೆ ಸಂದರ್ಭಗಳಲ್ಲಿ ಯುವ ಸಮುದಾಯದ ಪಾತ್ರ ಮುಖ್ಯ. ಪ್ರತಿನಿತ್ಯ ಅವಶ್ಯಕ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಪ್ರತಿ ಮಕ್ಕಳಿಗೂ ಜೀವ ವಿಮೆ ಹಾಗೂ ಉಪಯುಕ್ತ ವಿಪತ್ತು ನಿರ್ವಹಣಾ ಕಿಟ್​ ವಿತರಿಸಲಾಗುವುದು ಎಂದು ತಿಳಿಸಿದರು. > ಪಿ.ಜಿ.ಆರ್​.ಸಿಂಧ್ಯಾ ರಾಜ್ಯ ಸ್ಕೌಟ್ಸ್​ &ಗೈಡ್ಸ್​ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net