ರೈತರಿಗೆ ಪರಿಹಾರ ಒದಗಿಸಿ

Published on

ದೇವರಹಿಪ್ಪರಗಿ: ಡೋಣಿ ನದಿಯ ಪ್ರವಾಹದಿಂದ ಬೆಳೆ ಹಾನಿಗೀಡಾದ ಕೊಂಡಗೂಳಿ ಗ್ರಾಮದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರೇಡ್​&2 ತಹಸೀಲ್ದಾರ್​ ಎಸ್​.ಎಚ್​.ರಾಠೋಡ ಅವರಿಗೆ ಶುಕ್ರವಾರ ರೈತ ಮುಖಂಡರು ಮನವಿ ಸಲ್ಲಿಸಿದರು.

ರೈತ ಮುಖಂಡ ಎಸ್​.ಎಂ.ನಾಗಾವಿ ಮಾತನಾಡಿ, ಸತತ ಮಳೆ ಹಾಗೂ ಡೋಣಿ ನದಿ ಪ್ರವಾಹದಿಂದ ಜಮೀನುಗಳಲ್ಲಿ ನೀರು ನಿಂತು ಬೆಳೆ ಸಂಪೂರ್ಣ ಹಾಳಾಗಿದೆ. ಈಗಲೂ ಜಮೀನುಗಳಲ್ಲಿ ನೀರು ನಿಂತಿದ್ದು, ಸಲು ಅನ್ನದಾತರ ಕೈಸೇರುವುದಿಲ್ಲ. ಆದ್ದರಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಸಿದ್ದಣ್ಣ ಸಿಂದಗೇರಿ, ಪ್ರಕಾಶ ಕರಭಂಟನಾಳ, ಸಿದ್ಧನಗೌಡ ಪಾಟೀಲ, ಈರಣ್ಣ ಗಾಣಿಗೇರ, ಶಿವು ಗೊಬ್ಬೂರ, ನಾನಾಸಿಂಗ್​ ಕುಲಕರ್ಣಿ, ಶಿವು ಮಲ್ಲಾಬಾದಿ, ಬಸನಗೌಡ ಪಾಟೀಲ, ಲೋನಾರ್​ಗೌಡರ, ಮಹಾಂತಗೌಡ ಮಲಗೊಂಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net