ಯಲ್ಲಮ್ಮ ಕ್ಷೇತ್ರಕ್ಕೆ ರೈಲ್ವೆ ಸೇವೆ ಕಲ್ಪಿಸಲಿ

16SAVADATTI4
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.41666666, 0.225);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
Published on

ಸವದತ್ತಿ: ಯಲ್ಲಮ್ಮ ೇತ್ರಕ್ಕೆ ರೆಲು ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರದಿಂದ ಭೂಮಿ ಒದಗಿಸುವಂತೆ ಆಗ್ರಹಿಸಿ ಸೋಮವಾರ ರಾಜ್ಯ ರೆಲ್ವೆ ಹೋರಾಟ ಸಮಿತಿ ಹಾಗೂ ವಿವಿಧ ಸಂಟನೆಗಳಿಂದ ಪ್ರತಿಭಟನೆ ನಡೆಸಿ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​. ಮಠದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಅಧ್ಯ ಕುತುಬುದ್ದೀನ್​ ಖಾಜಿ ಮಾತನಾಡಿ, ಸುಮಾರು 50 ವರ್ಷಗಳ ಹಿಂದೆಯೇ ಇಲ್ಲಿ ರೆಲ್ವೆ ಸಂಪರ್ಕ ಕಲ್ಪಿಸಬೇಕಿತ್ತು. ಲೋಕಾಪುರದಿಂದ ರಾಮದುರ್ಗ&ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೆಲ್ವೆ ಸಂಪರ್ಕ ಕಲ್ಪಿಸುವ ಮಾರ್ಗವು ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡಲಿದೆ. ಈ ಮಾರ್ಗದಲ್ಲಿ ಶಕ್ತಿದೇವತೆ ಯಲ್ಲಮ್ಮನಗುಡ್ಡ, ಶಿರಸಂಗಿ ಕಾಳಮ್ಮದೇವಿ, ಶಬರಿಕೊಳ್ಳ, ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ರಾಮದುರ್ಗ ಶಿವನಮೂರ್ತಿಯಂಥ ಧಾರ್ಮಿಕ ಸ್ಥಳಗಳಿವೆ. ಇಲ್ಲಿಗೆ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ ಎಂದರು.

ಬಾಗಲಕೋಟೆಯಿಂದ ಕುಡಚಿ ಮಾರ್ಗ ಲೋಕಾಪುರವರೆಗೆ ರೆಲ್ವೆ ಕಾಮಗಾರಿ ಪೂರ್ಣಗೊಂಡಿದೆ. ಈಗ ಲೋಕಾಪುರದಿಂದ ಧಾರವಾಡವರೆಗೆ ರೈಲ್ವೆ ಮಾರ್ಗ ವಿಸ್ತರಿಸುವ ಅಗತ್ಯವಿದೆ. ಯೋಜನೆಯ ಸಮೀೆಯೂ ಮುಗಿದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ರಾಜ್ಯ ರೆಲ್ವೆ ಸಚಿವ ವಿ.ಸೋಮಣ್ಣ ಬೆಂಬಲಿಸಿದ್ದಾರೆ. ರಾಜ್ಯ ಸರ್ಕಾರ ಭೂಮಿ ನೀಡುವ ಪ್ರಸ್ತಾವನೆ ಸಲ್ಲಿಸಿದರೆ ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದಂತಾಗುತ್ತದೆ. ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಬೇಕಿದೆ. ಅದಾಗುವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಸಮಿತಿ ತಾಲೂಕಾಧ್ಯ ಆರ್​.ಬಿ. ಶಂಕರಗೌಡರ ಮಾತನಾಡಿ, ರೆಲ್ವೆ ಮಾರ್ಗ ಕಲ್ಪಿಸಿದರೆ ಯಲ್ಲಮ್ಮ ೇತ್ರ ಸಾಕಷ್ಟು ಅಭಿವದ್ಧಿಯಾಗಲಿದೆ ಎಂದರು.

ಮುಖಂಡ ಅಶ್ವತ್ಥ ವೆದ್ಯ ಮಾತನಾಡಿ, ರೆಲ್ವೆ ಸಾರಿಗೆಯಿಂದ ವ್ಯಾಪಾರ ವಹಿವಾಟು, ಶಿಣಕ್ಕೆ ಅನುಕೂಲವಾಗಲಿದೆ ಎಂದರು. ಬಾಗಲಕೋಟೆ ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಚಿಕ್ಕುಂಬಿ ಅಭಿನವ ನಾಗಲಿಂಗ ಶ್ರೀ, ಮುಖಂಡರಾದ ಸುಭಾಷ ಕೌಜಲಗಿ, ವಿರೂಪಾ ಮಾಮನಿ, ರಾಜು ಮಣ್ಣಿಕೇರಿ, ರಾಮದುರ್ಗ ರೆಲ್ವೆ ಹೋರಾಟ ಸಮಿತಿ ಅಧ್ಯ ಗೆಬು ಜೈನೇಖಾನ್​, ಬಾಗಲಕೋಟ ರೆಲ್ವೆ ಹೋರಾಟ ಸಮಿತಿ ಅಧ್ಯ ದುರ್ಗಪ್ಪ ಕಾಳಪ್ಪನವರ, ಎ್​.ಎಂ. ನದ್​ಾ, ಶ್ರೀಕಾಂತ ಹಟ್ಟಿಹೊಳಿ, ಬಸವರಾಜ ಕಪ್ಪಣ್ಣವರ ಇತರರು ಇದ್ದರು.

ಅರೆಬೆತ್ತಲೆ ಪಾದಯಾತ್ರೆ, ಪ್ರತಿಭಟನೆ ನಿರಂತರ: ರೆಲ್ವೆ ಹೋರಾಟ ಸಮಿತಿ ಅಧ್ಯ ಕುತುಬುದ್ದೀನ್​ ಖಾಜಿ ಯಲ್ಲಮ್ಮನ ದೇವಸ್ಥಾನದಿಂದ ಅರೆಬೆತ್ತಲೆಯಾಗಿ ಪಾದಯಾತ್ರೆ ಮೂಲಕ ಸವದತ್ತಿಗೆ ಆಗಮಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ನಂತರ ಅಧಿವೇಶನ ಮುಗಿಯುವವರೆಗೂ ಇಲ್ಲಿನ ಗಾಂಧಿ ಚೌಕದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರೆ ನೀಡಿದರು. ಪಟ್ಟಣದ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್​ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net