ಅರಣ್ಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಿ

17 nrp 2
Published on

ಎನ್.ಆರ್.ಪುರ: ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹಾಗೂ ಅರಣ್ಯ ಇಲಾಖೆಗೆ ಸೇರಿದ ಸಮಸ್ಯೆಗಳನ್ನು ಸರ್ಕಾರ ತಕ್ಷಣ ಬಗೆರಿಹರಿಸಬೇಕು ಎಂದು ಒತ್ತಾಯಿಸಿ ಮಲೆನಾಡು ನಾಗರಿಕ ರೈತಹಿತ ರಕ್ಷಣಾ ಸಮಿತಿ ಸದಸ್ಯರು ಅರಣ್ಯಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.

ರೈತಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಎರಡು ವರ್ಷದಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆನೆ ದಾಳಿಯಿದಂದ ಸೀತೂರಿನಲ್ಲಿ ರೈತ ಉಮೇಶ್ ಮೃತಪಟ್ಟಿದ್ದಾರೆ. ಕಾಡಾನೆ ಹಾಗೂ ಕಾಡುಕೋಣಗಳ ಹಾವಳಿ ತಪ್ಪಿಸಲು ಶಾಶ್ವತ ಬೇಲಿ ನಿರ್ಮಿಸಬೇಕು. ಭದ್ರಾ ಹಿನ್ನೀರಿನಲ್ಲಿ ನಮ್ಮ ತಾಲೂಕಿನ ಹಲವಾರು ರೈತರು ಮನೆ, ಜಮೀನು ಕಳೆದು ಕೊಂಡಿದ್ದಾರೆ. ಇಂದಿಗೂ ಅವರಿಗೆ ಪರ್ಯಾಯವಾಗಿ ನೀಡಿರುವ ಜಮೀನಿನ ಪಕ್ಕಾ ಪೋಡಿ ಆಗಿಲ್ಲ. ಅಲ್ಲದೇ ಈ ಜಮೀನುಗಳು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹೇಳಲಾಗುತ್ತಿದೆ ಎಂದು ಆರೋಪಿಸಿದರು.

ರೈತರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಭೂಮಿ ಸೆಕ್ಷನ್ 4 ರಲ್ಲಿ ಸೇರಿಕೊಂಡಿದೆ. ಬಾಳೆ ಗ್ರಾಮ ಪಂಚಾಯಿತಿಯ ಹೆನ್ನಂಗಿ, ಬೆಳ್ಳಂಗಿಯಲ್ಲಿ 100 ಎಕರೆ, ಹೊನ್ನೇಕೊಡಿಗೆ ಗ್ರಾಪಂನಲ್ಲಿ 221ಎಕರೆ ಪ್ರದೇಶ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದೆ. ಚಿನ್ನಕೊಡಿಗೆ, ಲಿಂಗಾಪುರ, ಭೈರಾಪುರದಲ್ಲೂ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂಮಿ ವರ್ಗಾವಣೆಗೊಂಡಿದೆ. ಆದರೂ ಈ ಎಲ್ಲ ಭೂಮಿ ಅರಣ್ಯಇಲಾಖೆ ತನ್ನ ಭೂಮಿ ಎಂದು ಹೇಳುತ್ತಿದೆ. ಇದನ್ನು ಅರಣ್ಯ ಸಚಿವರು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಮಲೆನಾಡು ರೈತರ ಹಿತ ರಕ್ಷಣಾ ಸಮಿತಿ ಪದಾಧಿಕಾರಿಗಳಾದ ಸಾರ್ಯ ದೇವಂತ್ , ಸಿ.ವೈ.ಶ್ರೀಕಾಂತ್, ಮುತ್ತಿನಕೊಪ್ಪ ಸಿ.ಎಲ್.ಮನೋಹರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net