ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ

Provide quality education to children
ವಿಜಯಪುರದ ಎಂಪಿಎಸ್​ ನಂ&6 ಇಬ್ರಾಹಿಂಪುರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಜಿ.ಪಂ. ಸಿಇಒ ರಿಷಿ ಆನಂದ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಿದರು. ಬಸವರಾಜ ತಳವಾರ, ರೆಹಮಾನ ದರ್ಗಾ, ಎಲ್​.ಎಸ್​. ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಗುಣಾತ್ಮಕ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಹೇಳಿದರು.

ನಗರದ ಎಂಪಿಎಸ್​ ನಂ&6 ಇಬ್ರಾಹಿಂಪುರ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಪುಷ್ಪ ನೀಡಿ ಸ್ವಾಗತಿಸುವ ಮೂಲಕ ಜಿಲ್ಲೆಯ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಮೊದಲಿನಿಂದಲೂ ಉಪಯುಕ್ತ ಶಿಕ್ಷಣ ದೊರಕಬೇಕು. ಬಾಲ್ಯದಿಂದಲೇ ಕಲಿಕೆಯಲ್ಲಿ ಪರಿಣಿತರಾದರೆ ಮುಂದೆ ಅನುಕೂಲವಾಗಲಿದೆ. ಪ್ರಸಕ್ತ ವರ್ಷಾರಂಭದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಗುಂಪು ಚಟುವಟಿಕೆ ಮೂಲಕ ಬರವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ನಗರ ವಲಯದ ೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ದೊರೆಯುವ ಸೌಲಭ್ಯ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನಿಡಬೇಕು ಎಂದರು.

ಡಿವೈಪಿಸಿ ಮಂಜುನಾಥ ಗುಳೇದಗುಡ್ಡ, ನಗರ ವಲಯದ ೇತ್ರ ಸಮನ್ವಯಾಧಿಕಾರಿ ರೆಹಮಾನ ದರ್ಗಾ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ, ವಲಯದ ಶಿಕ್ಷಣ ಸಂಯೋಜಕ ಎಲ್​.ಎಸ್​. ಬಿರಾದಾರ, ಪಿ.ಜಿ. ಹಿರೇಮಠ, ಎ.ಕೆ. ದಳವಾಯಿ, ಬಿಆರ್​ಪಿ ಸವಿತಾ ಗೋಡೇಕರ, ಎಸ್​ಡಿಎಂಸಿ ಅಧ್ಯಕ್ಷ ಎಲ್​.ಜಿ. ಶೀಳಿನ, ಶಿಕ್ಷಕರ ಸಂದ ಉಪಾಧ್ಯಕ್ಷ ಬಸೀರ ನದಾಫ್​, ಕೋಶಾಧ್ಯಕ್ಷ ಬಸವರಾಜ ಗಿರಿನಿವಾಸ, ಕಬೂಲ್​ ಕೊಕಟನೂರ, ಐ.ಆರ್​. ಹೊಸಮನಿ, ಚಂದ್ರಶೇಖರ ಹಾರಿವಾಳ, ಸಿ.ಆರ್​. ಕೋರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net