

ತೇರದಾಳ: ಕುರುಹಿನಶೆಟ್ಟಿ ಸಮಾಜ ಬಾಂಧವರು ಶ್ರಮ ಜೀವಿಯಾಗಿದ್ದು, ಅಂತಹ ಸಮಾಜದವರು ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ನಾದಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸರ್ಕಾರ ಕೂಡ ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿವೆ. ಆದ್ದರಿಂದ ಪಾಲಕರು ಕಡ್ಡಾಯವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮೈಗೂರು ಶಿವಾನಂದ ಮಠದ ಗುರುಪ್ರಸಾದ ಶ್ರೀಗಳು ಮಾತನಾಡಿ, ಭಾರತವು ಸಾಂಸ್ಕೃತಿಕ ಇತಿಹಾಸ ಸಾರುವ ದೇಶವಾಗಿದೆ. ಜಗತ್ತಿನ ಹಲವು ರಾಷ್ಟ್ರಗಳು ದೇಶದ ಸಂಸ್ಕೃತಿ ಪಾಲಿಸಿ ಆರಾಧಿಸುವ ಕೆಲಸ ಮಾಡುತ್ತಿವೆ. ಆದ್ದರಿಂದ ದೇಶದ ಸಂಪತ್ತು ಎನಿಸಿಕೊಂಡಿರುವ ಯುವಶಕ್ತಿ ದೇಶದ ಸಂಸ್ಕೃತಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಹುಬ್ಬಳ್ಳಿಯ ಮಡಿವಾಳಪ್ಪ ಮುಂಡಾಸದ, ಪುರಸಭೆ ಉಪಾಧ್ಯಕ್ಷೆ ನಸ್ರೀನ್‌ಬಾನು ನಗಾರ್ಜಿ, ಕಾಶಿನಾಥ ರಾಠೋಡ, ರುಸ್ತುಂ ನಿಪ್ಪಾನಿ, ಸಚಿನ ಕೊಡತೆ, ಸದಾಶಿವ ಹೊಸಮನಿ, ಕೇದಾರಿ ಪಾಟೀಲ, ಪರಪ್ಪ ಆಲಗುಂಡಿ, ಸಂಜು ಖವಾಸಿ, ಬಸವರಾಜ ಚಿಂಚಖಂಡಿ ಮತ್ತಿತರರಿದ್ದರು.