ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ

IMG_20200103_101124
Published on

ನುಗ್ಗೇಹಳ್ಳಿ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಶಿಕ್ಷಕರು ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಚಿಗುರು ಸಂಭ್ರಮ ಶಾಲಾ ವಾರ್ಷಿ ಕೋತ್ಸವ ಹಾಗೂ ಇಂಗ್ಲಿಷ್ ಎಂಪವರ್‌ಮೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದೊಂದಿಗೆ ವೃತ್ತಿ ಕೌಶಲ, ಮೌಲ್ಯಯುತ ಶಿಕ್ಷಣ ಹಾಗೂ ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ಎ.ಡಿ.ಸಿ.ಕಮ್ಯುನಿಕೇಷನ್‌ನ ಮೈಲಾರಯ್ಯ, ಮಹೇಶ್ವರಸ್ವಾಮೀಜಿ, ಚಂದ್ರಶೇಖರ ಗುರೂಜಿ, ಶ್ರೀಧರ್‌ಸ್ವಾಮೀಜಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಶಿಕ್ಷಣ ಸಂಯೋಜಕ ನಿತ್ಯಾನಂದ್, ಮುಖ್ಯ ಶಿಕ್ಷಕ ಈರಯ್ಯ, ಶಿಕ್ಷಕರಾದ ಕೆಂಪಯ್ಯ, ಅನ್ವರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net