ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಿ

dvd school
ದೇವದುರ್ಗದಲ್ಲಿ ಆಯೋಜಿಸಿದ್ದ ಅಕ್ಷರಧಾಮ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪಿಐ ಎಸ್.ಮಂಜುನಾಥ ಉದ್ಘಾಟಿಸಿದರು. ಉದ್ಯಮಿ ಶರಣಪ್ಪ ಬಳೆ, ಸಮೂಹ ಸಂಸ್ಥೆ ನಿರ್ದೇಶಕ ಶಿವಲಿಂಗಪ್ಪ ಘಂಟಿ, ಉಪನ್ಯಾಸಕ ಪ್ರಕಾಶ ಬುದ್ದಿನ್ನಿ, ಸಂಸ್ಥೆ ಮುಖ್ಯಸ್ಥೆ ಉಷಾ ಎಸ್.ಬಳೆ, ಶರಣಪ್ಪ, ಆಡಳಿತ ಮಂಡಳಿ ಅಧ್ಯಕ್ಷ ಸುರೇಶ ಬಳೆ, ಸಿದ್ದಲಿಂಗಪ್ಪ ಬಳೆ ಇದ್ದರು.
Published on

ದೇವದುರ್ಗ: ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಿದ್ದು, ಪಾಲಕರು ಹೊಸತನ, ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾರೆ. ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಪಿಐ ಎಸ್.ಮಂಜುನಾಥ ಹೇಳಿದರು.

ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಕ್ಷರಧಾಮ ಪಬ್ಲಿಕ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಅಕ್ಷರ ಕಲಿಕೆಗೆ ಇಂದು ವಿದ್ಯಾರ್ಥಿಗಳಿಗೆ ತುಂಬ ಆಯ್ಕೆಗಳಿವೆ. ಸರ್ಕಾರದ ವಿವಿಧ ಯೋಜನೆಗಳ ಜತೆಗೆ ಶಿಕ್ಷಣ ಸಂಸ್ಥೆಗಳು ಕೂಡ ಅಕ್ಷರಜ್ಞಾನ ಬಿತ್ತಲು ಶ್ರಮಿಸುತ್ತವೆ. ಗುಣಮಟ್ಟದ ಹಾಗೂ ವಿನೂತನ ಶಿಕ್ಷಣ ನೀಡಿದರೆ ಮಾತ್ರ ಪಾಲಕರು ತೃಪ್ತಿಯಾಗುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಥೆಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಉದ್ಯಮಿ ಶರಣಪ್ಪ ಬಳೆ ಅಧ್ಯಕ್ಷತೆವಹಿಸಿದ್ದರು. ಸಮೂಹ ಸಂಸ್ಥೆ ನಿರ್ದೇಶಕ ಶಿವಲಿಂಗಪ್ಪ ಘಂಟಿ, ಉಪನ್ಯಾಸಕ ಪ್ರಕಾಶ ಬುದ್ದಿನ್ನಿ, ಸಂಸ್ಥೆ ಮುಖ್ಯಸ್ಥೆ ಉಷಾ ಎಸ್.ಬಳೆ, ಶರಣಪ್ಪ, ಆಡಳಿತ ಮಂಡಳಿ ಅಧ್ಯಕ್ಷ ಸುರೇಶ ಬಳೆ, ಸಿದ್ದಲಿಂಗಪ್ಪ ಬಳೆ, ವಿಶ್ವನಾಥ ಬಳೆ, ಮಂಜುನಾಥ, ಶಶಿಧರ್, ಗಿರೀಶ ಬಳೆ, ಶಿಕ್ಷಕರಾದ ಅಕ್ಷತಾ ಪಾಟೀಲ್, ಸಿಮ್ರಾನ್, ನಮ್ರತಾ, ತೈಸಿನ್, ನಿಷ್ಕಲಾ ಮಡ್ಡಿಪ್ಯಾಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net