

ಇಂಡಿ: ಪಶ್ಚಿಮ ಬಂಗಾಳದ ಕಲ್ಕತ್ತಾದ ಆರ್.ಜಿ.ಕರ್ ವೈದ್ಯಕಿಯ ಕಾಲೇಜಿನಲ್ಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಭಾರತೀಯ ವೈದ್ಯರ ಸಂ, ಆಯುರ್ವೇದ ೆಡರೇಷನ್ ಅಸೋಸಿಯೇಷನ್, ಭಾರತೀಯ ದಂತ ವೈದ್ಯರ ಅಶೋಸಿಯೇಷನ್ ಟಕದ ವತಿಯಿಂದ ಶನಿವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್&2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಗಜಾಕೋಶ ಆಸ್ಪತ್ರೆಯಿಂದ ಪ್ರತಿಭಟನೆ ಪ್ರಾರಂಭವಾಗಿ ಬಸವೇಶ್ವರ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಬೃಹತ್ ಸಭೆಯಾಗಿ ಮಾರ್ಪಟ್ಟಿತು.
ಭಾರತೀಯ ವೈದ್ಯರ ಸಂದ ಇಂಡಿ ಟಕದ ಅಧ್ಯ ಡಾ.ಅನೀಲ ವಾಲಿ ಮಾತನಾಡಿ, ವೈದ್ಯೆಯನ್ನು ಕಿಡಿಗೇಡಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡಿ ದೇಶವನ್ನೇ ಬೆಚ್ಚಿ ಬಿಳಿಸಿದೆ.
ಇಂಥ ಟನೆಯಿಂದ ರಾತ್ರಿ ಮತ್ತು ತುರ್ತು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರ ಸುರತೆಯ ಬಗ್ಗೆ ಆದ್ಯತೆ ನೀಡಬೇಕು ಎಂದರು.
ಸ್ಪಂದನಾ ಆಸ್ಪತ್ರೆ ಎಂಡಿ ಡಾ.ಲಕ್ಷಿ$್ಮಕಾಂತ ಮೇತ್ರಿ ಮಾತನಾಡಿ, ಅಪರಾಧಿಗಳನ್ನು ಬಂಧಿಸಿ ಕಠಿಣ ಶಿೆ ವಿಧಿಸಬೇಕು ಎಂದರು. ಡಾ.ರಮೇಶ ರಾಠೋಡ ಮಾತನಾಡಿದರು.
ಭಾರತೀಯ ವೈದ್ಯರ ಸಂದ ಇಂಡಿ ಟಕದ ಗೌರವ ಅಧ್ಯಕ್ಷೆ ಭಾರತಿ ಗಜಾಕೋಶ, ಕಾರ್ಯದರ್ಶಿ ಡಾ.ಎಂ.ಎಚ್. ಅಂಕಲಗಿ, ವೈದ್ಯರಾದ ರಮೇಶ ಪೂಜಾರಿ, ಸಂತೋಷ ಪಾಟೀಲ, ಪ್ರತಿಕ ಪಾಟೀಲ, ಆರ್.ಎಂ. ಮಾಳಿ, ಆರ್.ವಿ. ರೋಡಗಿ, ಶ್ರೀಧರ ಕಾವಿ, ಭವಾನಿಕುಮಾರ ಕದಮ್, ನಾಜಿಯಾ ಮುಲ್ಲಾ, ಪ್ರಭಾಕರ ಬಿರಾದಾರ, ಕುಮಾರಗೌಡ ಪಾಟೀಲ, ರಾವೇಂದ್ರ ಬಿರಾದಾರ, ಎಂ.ಎನ್. ಕೋಳಿ, ಮಲ್ಲಿಕಾರ್ಜುನ ಬಿರಾದಾರ, ಕಮಲಾಕರ ದೇಸಾಯಿ, ಎಸ್.ಎಸ್. ಮರಗೂರ, ಅಜಯ ದೇಸಾಯಿ, ವಿಕಾಸ ಸಿಂದಗಿ, ಆರ್.ಎಸ್. ತಾಂಬೆ, ಅತಾ ಬೊಳಸುರ, ಅನುಷಾ ಕೊಪ್ಪಾ, ಶ್ರುತಿ ಕುಂಬಾರ, ಕಿರಣ ಗಜಾಕೋಶ, ಪ್ರೀತಿ ಕೋಳೆಕರ, ಅಮೀತ ಕೋಳೆಕರ, ವಿಪುಲ ಕೋಳೆಕರ ಇತರರಿದ್ದರು.