ಟಂಟಂಗಳಿಗೆ ಪಾರ್ಕಿಂಗ್ ಕಲ್ಪಿಸಿ

Provide parking for tantams
ಇಂಡಿ ಪಟ್ಟಣದ ಬಸ್ ನಿಲ್ದಾಣ ಹತ್ತಿರ ಟಂಟಂಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಟಂಟಂ(ಆಟೋ) ಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಮನವಿ ಸಲ್ಲಿಸಲಾಯಿತು.
Published on

ಇಂಡಿ: ರೈಲ್ವೆ ಸ್ಟೇಷನ್ ಕಡೆಗೆ ಹೋಗುವ ಟಂಟಂಗಳಿಗೆ ಬಸ್ ನಿಲ್ದಾಣದ ಹತ್ತಿರ ಪಾರ್ಕಿಂಗ್ ಸ್ಥಳ ಅಳವಡಿಸಬೇಕೆಂದು ಆಗ್ರಹಿಸಿ ಪಟ್ಟಣದ ಟಂಟಂ(ಆಟೋ) ಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ತಾಲೂಕಾ ಅಧ್ಯಕ್ಷ ಶಿವು ಬಡಿಗೇರ ಮಾತನಾಡಿ, ಪಟ್ಟಣದಿಂದ ರೇಲ್ವೆ ಸ್ಟೇಷನ್‌ಗೆ ಹಗಲಿನಲ್ಲಿ ಒಂದು ತಾಸಿನಲ್ಲಿ ಕನಿಷ್ಠ 15 ಟಂಟಂ ಹೋಗುತ್ತವೆ. ಅದಲ್ಲದೆ ಪ್ರತಿನಿತ್ಯ ಇಂಡಿ ರೈಲ್ವೆ ಸ್ಟೇಷನದಿಂದ ವಿಜಯಪುರ ಸೋಲಾಪುರ, ಬೆಂಗಳೂರ, ಬಾಂಬೆ, ಹೈದ್ರಾಬಾದ್, ಮಂತ್ರಾಲಯ ಕಡೆಗೆ ಹೋಗುವ ರೈಲ್ವೆ ಸಂಖ್ಯೆ ಹೆಚ್ಚಾಗಿದ್ದು ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇಂಡಿ ರೈಲ್ವೆ ಸ್ಟೇಷನ್‌ದಲ್ಲಿ ಜನವಸತಿಯೂ ಸಾಕಷ್ಟಿದೆ. ಸದ್ಯ ನಿಲ್ಲುವ ಟಂಟಂಗಳಿಗೆ ಅಲ್ಲಿ ನಿಲ್ಲಿಸಬೇಡಿ ಎಂದು ಪೊಲೀಸರು ಕಿರಿಕಿರಿ ಮಾಡುತ್ತಾರೆ. ಹೀಗಾಗಿ ಬಿಎಸ್‌ಎನ್‌ಎಲ್ ಎದುರುಗಡೆ ಅಥವಾ ಎಲ್ಲಿಯಾದರೂ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಿವು ಕೋಳಿ, ಕಿರಣ ಇಂಗಳೆ, ಸುರೇಶ ಹಿರೇಮಠ, ಮಲ್ಲು ಮೇತ್ರಿ, ಶಶಿ ವಾಲಿಕಾರ, ನಬಿಲಾಲ ಬಾಗವಾನ, ಪ್ರದೀಪ ಪವಾರ, ಮಹೇಶ ಅಗಸರ, ಖಾಜಿಸಾಬ ಬಾಗವಾನ, ಈಸಾಬ ಎಕ್ಕೆವಾಲೆ, ಮುತ್ತು ಹೊಸಮನಿ, ಸಮೀರ ಪಟೇಲ, ರಾಕೇಶ ಜಾಧವ, ವಿಠ್ಠಲ ವಾಲಿಕಾರ, ವಾಶೀಮ ಅಷ್ಟೇಕರ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net