ಅಂಚೆ ಸೇವಕರಿಗೆ ಅಗತ್ಯ ಸೌಲಭ್ಯ ಒದಗಿಸಿ

04-10-Shiva-2
ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಯಚೂರಿನ ಕೇಂದ್ರ ಅಂಚೆ ಕಚೇರಿ ಮುಂದೆ ಅಂಚೆ ಸೇವಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ವಿಭಾಗೀಯ ಕಾರ್ಯದರ್ಶಿ ನರಸಿಂಹಾಚಾರ್ಯ, ಪದಾಕಾರಿಗಳಾದ ರಾಮನಗೌಡ, ಮಲ್ಲಯ್ಯ, ಬಸವರಾಜ, ಚನ್ನಾರೆಡ್ಡಿ, ದೊಡ್ಡಯ್ಯಸ್ವಾಮಿ, ಬಲವಂತರೆಡ್ಡಿ, ಶ್ರೀನಿವಾಸರೆಡ್ಡಿ, ಭೀಮಣ್ಣ, ಅರುಣಕುಮಾರ, ಶರಣಪ್ಪ, ನರೇಂದ್ರಕುಮಾರ ಇದ್ದರು.
Published on

ರಾಯಚೂರು: ಪಿಂಚಣಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಸ್ಥಳೀಯ ಕೇಂದ್ರ ಅಂಚೆ ಕಚೇರಿ ಮುಂದೆ ಅಖಿಲ ಭಾರತ ಅಂಚೆ ಸೇವಕರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಅಂಚೆ ಸೇವಕರಿಗೆ ಎಂಟು ಗಂಟೆಗಳ ಕೆಲಸದ ಅವ ನಿಗದಿಪಡಿಸಬೇಕು. ಸೇವಾ ಹಿರಿತನ ನೀಡಿ ಹೆಚ್ಚಿನ ಅವ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.
ಅವೈಜ್ಞಾನಿಕ ಗುರಿ ನೀಡಿ ಮೇಳ ನಡೆಸುತ್ತಿರುವುದನ್ನು ನಿಲ್ಲಿಸಬೇಕು. ಗುರಿ ಹೆಸರಿನಲ್ಲಿ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು. ಜಿಡಿಎಸ್ ಗ್ರಾಚ್ಯುಟಿ ಹಣವನ್ನು ಐದು ಲಕ್ಷ ರೂ. ಹೆಚ್ಚಿಸಬೇಕು. ಗುಂಪು ವಿಮೆಯನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು.
ಜಿಡಿಎಸ್ ನೌಕರರ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೆರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ವಿಭಾಗೀಯ ಕಾರ್ಯದರ್ಶಿ ನರಸಿಂಹಾಚಾರ್ಯ, ಪದಾಕಾರಿಗಳಾದ ರಾಮನಗೌಡ, ಮಲ್ಲಯ್ಯ, ಬಸವರಾಜ, ಚನ್ನಾರೆಡ್ಡಿ, ದೊಡ್ಡಯ್ಯಸ್ವಾಮಿ, ಬಲವಂತರೆಡ್ಡಿ, ಶ್ರೀನಿವಾಸರೆಡ್ಡಿ, ಭೀಮಣ್ಣ, ಅರುಣಕುಮಾರ, ಶರಣಪ್ಪ, ನರೇಂದ್ರಕುಮಾರ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net