ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ

17Ankalagi1
Published on

ಅಂಕಲಗಿ: ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯ ರಾಜೇಂದ್ರ ಗೌಡಪ್ಪಗೋಳ ಹೇಳಿದರು.

ಸಮೀಪದ ಸುಳಧಾಳ ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಯಾಣಿಕರಿಗೆ ಬೋರವೆಲ್ ನೀರಿನ ಬದಲು ಹಿಡಕಲ್ ಜಲಾಶಯದ ನೀರು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯರಸ್ತೆಯಿಂದ ರೈಲ್ವೆ ನಿಲ್ದಾಣ ಸಂಪರ್ಕಿಸುವ ಕಚ್ಚಾ ರಸ್ತೆ ಅಗಲೀಕರಣಗೊಳಿಸಿ ಡಾಂಬ ರೀಕರಣ ಮಾಡಬೇಕು ಎಂದು ತಿಳಿಸಿದರು.

ಸಂಚಾರಸಿಕ್ಕು ತಪ್ಪಿಸಲು ಮೇಲ್ಸೇತುವೆ ನಿರ್ಮಿಸಬೇಕು. ಚನ್ನಮ್ಮ ಮತ್ತು ಎಲ್‌ಟಿಟಿ ವೇಗದೂತ ರೈಲ್ವೆ ನಿಲುಗಡೆಯಾಗಬೇಕು ಎಂದರು. ಬೆಳಗಾವಿ ವಿಭಾಗದ ಚ್ೀ ಕಮರ್ಷಿಯಲ್ ಇನ್ಸ್‌ಪೆಕ್ಟರ್ ಭೀಮಪ್ಪ ಮೇದಾರ ಮಾತನಾಡಿ, ಸಮಿತಿ ಬೇಡಿಕೆಗಳನ್ನು ಮೇಲಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು ಎಂದರು. ಸಲಹಾ ಸಮಿತಿ ಸದಸ್ಯರಾದ ಭೀಮಗೌಡ ಪಾಟೀಲ, ಕಲ್ಲಪ್ಪ ವಾಟರಿ, ಗಣಪತಿ ಮರಾಠೆ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಆನಂದ ಅತ್ತುಗೋಳ, ಸ್ಟೇಷನ್ ಮಾಸ್ಟರ್ ಸೋನು ಚೌಧರಿ, ರುದ್ರಪ್ಪ ಪಾಟೀಲ, ಪಿಡಿಒ ಮಂಜುನಾಥ ಪಾಟೀಲ, ಜಗದೀಶ ಕಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net