ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ

17Ankalagi1
Published on

ಅಂಕಲಗಿ: ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯ ರಾಜೇಂದ್ರ ಗೌಡಪ್ಪಗೋಳ ಹೇಳಿದರು.

ಸಮೀಪದ ಸುಳಧಾಳ ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಯಾಣಿಕರಿಗೆ ಬೋರವೆಲ್​ ನೀರಿನ ಬದಲು ಹಿಡಕಲ್​ ಜಲಾಶಯದ ನೀರು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯರಸ್ತೆಯಿಂದ ರೈಲ್ವೆ ನಿಲ್ದಾಣ ಸಂಪರ್ಕಿಸುವ ಕಚ್ಚಾ ರಸ್ತೆ ಅಗಲೀಕರಣಗೊಳಿಸಿ ಡಾಂಬರೀಕರಣ ಮಾಡಬೇಕು. ನಿಲ್ದಾಣದ ಕಾಂಪೌಂಡ್​ಗೆ ಗೇಟ್​ ಮತ್ತು ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ತಿಳಿಸಿದರು.

ಪ್ಲಾಟ್​ ಾಮ್​ರ್ ಮೇಲೆ ಶೆಲ್ಟರ್​ ನಿರ್ಮಿಸಬೇಕು. ಜತೆಗೆ ಸಂಚಾರಸಿಕ್ಕು ತಪ್ಪಿಸಲು ಮೇಲ್ಸೇತುವೆ ನಿರ್ಮಿಸಬೇಕು. ಪ್ರಯಾಣಿಕರಿಗೆ ಸುಸಜ್ಜಿತ ವಿಶ್ರಾಂತಿ ಗೃಹ ಹಾಗೂ ಗ್ರಂಥಾಲಯ ಅಗತ್ಯವಿದೆ. ಹೀಗಾಗಿ, ಇಲಾಖೆ ಅನುಮತಿ ಪಡೆದು ಸೌಲಭ್ಯ ಒದಗಿಸಬೇಕು. ಚನ್ನಮ್ಮ ಮತ್ತು ಎಲ್​ಟಿಟಿ ವೇಗದೂತ ರೈಲ್ವೆ ನಿಲುಗಡೆಯಾಗಬೇಕು ಎಂದರು.

ಬೆಳಗಾವಿ ವಿಭಾಗದ ಚ್​ೀ ಕಮರ್ಷಿಯಲ್​ ಇನ್ಸ್​ಪೆಕ್ಟರ್​ ಭೀಮಪ್ಪ ಮೇದಾರ ಮಾತನಾಡಿ, ಸಮಿತಿ ಬೇಡಿಕೆಗಳನ್ನು ಮೇಲಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು ಎಂದರು.

ಸಲಹಾ ಸಮಿತಿ ಸದಸ್ಯರಾದ ಭೀಮಗೌಡ ಪಾಟೀಲ, ಕಲ್ಲಪ್ಪ ವಾಟರಿ, ಗಣಪತಿ ಮರಾಠೆ, ಬಿಜೆಪಿ ಯುವ ಮೋರ್ಚಾ ಉಪಾಧ್ಯ ಆನಂದ ಅತ್ತುಗೋಳ, ಸ್ಟೇಷನ್​ ಮಾಸ್ಟರ್​ ಸೋನು ಚೌಧರಿ, ರುದ್ರಪ್ಪ ಪಾಟೀಲ, ಪಿಡಿಒ ಮಂಜುನಾಥ ಪಾಟೀಲ, ಜಗದೀಶ ಕಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net