ಬಾಗಿವಾಳು ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಿ

ಬಾಗಿವಾಳು ಗ್ರಾಮದಲ್ಲಿ ಆಯೋಜಿಸಿದ್ದ ಹಳ್ಳಿ ಧ್ವನಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸತ್ಯಭಾಮ,  ವಿಜಯ್ ಅಂಗಡಿ, ಮಧುಸೂದನ್, ಪವಿತ್ರಾ, ಸಂತೋಷ್‌ಕುಮಾರ್ ಇದ್ದರು.
ಬಾಗಿವಾಳು ಗ್ರಾಮದಲ್ಲಿ ಆಯೋಜಿಸಿದ್ದ ಹಳ್ಳಿ ಧ್ವನಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸತ್ಯಭಾಮ, ವಿಜಯ್ ಅಂಗಡಿ, ಮಧುಸೂದನ್, ಪವಿತ್ರಾ, ಸಂತೋಷ್‌ಕುಮಾರ್ ಇದ್ದರು.
Published on

ಗಂಡಸಿ: ಗ್ರಾಮದ ಏಳಿಗೆಗೆ ಶ್ರಮಿಸಿದ ವ್ಯಕ್ತಿಗಳ ವಿಚಾರಧಾರೆಗಳು, ಗ್ರಾಮದ ಇತಿಹಾಸ, ಅಭಿವೃದ್ಧಿ, ದೇವಾಲಯಗಳು, ಸಂಘ- ಸಂಸ್ಥೆಗಳಲ್ಲಿ ಇರುವ ಸೌಲಭ್ಯ ಕೊರತೆ, ಕಲೆ, ಕ್ರೀಡೆ, ಕೃಷಿ, ಪರಿಸರ, ಪರಿಸರವಾದಿಗಳು, ವಿದ್ಯಾ ದೇಗುಲಗಳ ಚಿತ್ರಣವನ್ನು ಹೆಕ್ಕಿ ತೆಗೆಯುವುದೇ ಹಳ್ಳಿ ಧ್ವನಿ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಹೇಳಿದರು.

ಹೋಬಳಿಯ ಬಾಗಿವಾಳು ಗ್ರಾಮದಲ್ಲಿ ಗುರುವಾರ ಹಾಸನ ಆಕಾಶವಾಣಿ ಕೇಂದ್ರ ವತಿಯಿಂದ ಆಯೋಜಿಸಿದ್ದ ಹಳ್ಳಿ ಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಗಿವಾಳು ಸ್ವಾತಂತ್ರ್ಯಕ್ಕಾಗಿ 7 ಹೋರಾಟಗಾರರು ಹೋರಾಟ ನಡೆಸಿದ್ದು, ಹೋರಾಟ ಗಾರರನ್ನು ಹೊಂದಿರುವ ಗ್ರಾಮ ಇದಾಗಿದೆ. ಹೋಬಳಿಯಲ್ಲಿ ಹೆಚ್ಚು ವಿದ್ಯಾವಂತರು, ಬುದ್ಧಿಜೀವಿಗಳು, ಸೈನಿಕರು, ಸರ್ಕಾರಿ ಉದ್ಯೋಗಿ ಗಳಿದ್ದು, ಗ್ರಾಮದ ಅಭಿವೃದ್ಧಿಗೆ ಕೈಲಾದ ಸಹಾಯ ಮಾಡಬೇಕು ಎಂದರು.

ಗ್ರಾಮದ ನವ ಭಾರತ ಪ್ರೌಢಶಾಲೆ ಬಳಿ 12 ಎಕರೆ ವಿಶಾಲವಾದ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣ, ಏತ ನೀರಾವರಿ ಯೋಜನೆಯಿಂದ ಬಾಗಿವಾಳು ಕೆರೆಗೆ ನೀರು, ಬಾಗಿವಾಳು ಗೇಟ್‌ನಿಂದ ಮುಖ್ಯ ರಸ್ತೆವರೆಗೆ ರಸ್ತೆ ವಿಸ್ತರಣೆ, ಅಂಗನವಾಡಿ ಕಟ್ಟಡ, ಹಾಸ್ಟೆಲ್ ಕಟ್ಟಡ ದುರಸ್ತಿ, ಡಿಜಿಟಲ್ ಗ್ರಂಥಾಲಯವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಸ್ಥಳೀಯ ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಡಿಸಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್‌ಕುಮಾರ್, ಹಾಸನ ಆಕಾಶವಾಣಿಯ ವಿಜಯ್ ಅಂಗಡಿ, ವಿ.ಮಧುಸೂದನ್, ಬಾಗಿವಾಳು ಗ್ರಾಪಂ ಅಧ್ಯಕ್ಷೆ ಪವಿತ್ರಾ, ಗಂಡಸಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆರತಿ, ಗಂಡಸಿ ಉಪ ತಹಸೀಲ್ದಾರ್ ಮೋಹನ್‌ಕುಮಾರ್, ಬಾಗಿವಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net