

ಹೊಸಪೇಟೆ: ಮೋಟಾರು ಚಾಲಿತ ವಾಹನ ನೀಡುವಂತೆ ಒತ್ತಾಯಿಸಿ ಅಂಗವಿಕಲರ ಸಂಘಟನೆಯಿಂದ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್‌ಗೆ ಮನವಿ ಸಲ್ಲಿಸಲಾಯಿತು. ನಗರಸಭೆಯ ವಿಕಲಚೇತನರ ಅನುದಾನದಲ್ಲಿ ಶೇ.5 ಮೋಟಾರು ಚಾಲಿತ ವಾಹನಗಳನ್ನ ವಿತರಣೆ ಮಾಡಲಾಗುತ್ತದೆ. ಸರ್ಕಾರ ಹಾಗೂ ವಿಕಲಚೇತನರ ಇಲಾಖೆ ನಿಯಮಗಳನ್ನು ಅನುಸರಿಸಿ ಈವರೆಗೂ ಮೋಟಾರು ಚಾಲಿತ ವಾಹನಗಳು ಪಡೆಯದವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಸಂಘಟನೆ ನಗರ ಘಟಕದ ಅಧ್ಯಕ್ಷ ಲೋಹಿತ್ ತಳವಾರ್, ಉಪಾಧ್ಯಕ್ಷ ಮೆಹಬೂಬ್ ಬಾಷಾ, ಕಾರ್ಯದರ್ಶಿ ಪಾಂಡುನಾಯ್ಕ, ಸದಸ್ಯರಾದ ಎನ್.ಹುಲಿಗೆಮ್ಮ, ರಾಜಸಾಬ್, ಹುಲುಗಪ್ಪ, ತಾಯಣ್ಣ, ಹಜರತ್ ಅಲಿ, ದಾದು, ಮಾಬಾಷಾ, ತಾಯಮ್ಮ, ಗಂಗಮ್ಮ ಇತರರಿದ್ದರು.