ಶಮಿತಾ ಸಾವಿಗೆ ತಾರ್ಕಿಕ ನ್ಯಾಯ ಒದಗಿಸಿ

kpp1 (4)
Published on

ಕೊಪ್ಪ: ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಮೃತಪಟ್ಟ ವಿದ್ಯಾರ್ಥಿನಿ ಶಮಿತಾ ಸಾವಿಗೆ ಸರ್ಕಾರ ತಾರ್ಕಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಕೊಪ್ಪ ಚಲೋ ನಡೆಸಿದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಮಾತನಾಡಿ, ಶಮಿತಾ ಸಾವು ಹಲವು ಅನುಮಾನಗಳನ್ನು ಎಡೆ ಮಾಡಿಕೊಟ್ಟಿದೆ. ಮೃತಪಟ್ಟು ಒಂದು ವಾರ ಕಳೆದರೂ ಸಾವಿನ ಕಾರಣ ತಿಳಿದು ಬಂದಿಲ್ಲ. ಸರ್ಕಾರ, ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕೊಂಡು ಸಾವಿಗೆ ನ್ಯಾಯ ಒದಗಿಸಬೇಕು ಎಂದರು.

ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿರುವ ವಿದ್ಯಾರ್ಥಿನಿ ಸಾವಿನ ಪ್ರಕರಣ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ವಸತಿ ಶಾಲೆಯಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿರುವುದು ಹಾಗೂ ಮಹಿಳಾ ಮೇಲ್ವಿಚಾರಕರನ್ನು ನೇಮಿಸದಿರುವುದೇ ವಿದ್ಯಾರ್ಥಿ ಸಾವಿಗೆ ಪ್ರಮುಖ ಕಾರಣವಾಗಿದೆ. ವಸತಿ ಶಾಲೆಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ್, ಜಿಲ್ಲಾ ಸಂಚಾಲಕ ಧನುಷ್, ಅಭಿರಾಮ, ರಾಕೇಶ್,ಪ್ರತೀಕ್ ಹೆಗ್ಡೆ, ಸಿದ್ದಾರ್ಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net