ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡಿ

13 KRN-1
ಕೆ.ಆರ್.ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಡಾ.ಎಸ್.ಎಂ.ಮಾಲೇಗೌಡ, ಚೀರ‌್ನಹಳ್ಳಿಶಿವಣ್ಣ, ಎಂ.ಎಸ್.ಹರೀಶ್, ಕಾಳಿಕುಮಾರ್, ಕೆ.ಎಚ್.ಕೃಷ್ಣೇಗೌಡ, ನಟರಾಜ, ಡಿ.ಸಿ.ರವಿ, ಮಹೇಶ್‌ಗೌಡ, ಕೆ.ಎನ್.ಪ್ರಸನ್ನಕುಮಾರ್, ಮುಬೀನಾಬಾನು, ಎಂ.ಮಂಜುಳಾ ಇದ್ದರು.
Published on

ಕೆ.ಆರ್.ನಗರ: ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಸಂಘ ಆರ್ಥಿಕವಾಗಿ ಲಾಭದತ್ತ ಸಾಗುತ್ತಿದ್ದು, ಇದರ ಪ್ರಮಾಣವನ್ನು ಹೆಚ್ಚಿಸಲು ಉಳ್ಳವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಠೇವಣಿ ಪಡೆಯಲು ಆಡಳಿತ ಮಂಡಳಿ ಪ್ರಯತ್ನಿಸಬೇಕು ಎಂದು ಗೌರವಾಧ್ಯಕ್ಷರೂ ಆದ ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸಂಘದ ಆಡಳಿತ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೇವಲ 10 ಲಕ್ಷ ರೂ. ಬಂಡವಾಳದೊಂದಿಗೆ ಆರಂಭಗೊಂಡ ಸಂಘ ಪ್ರಸಕ್ತ ಮೂರು ಕೋಟಿ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ. ಸಂಘದ ವತಿಯಿಂದ ಸಣ್ಣ ಪುಟ್ಟ ವರ್ತಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕೆಂದು ಸಲಹೆ ನೀಡಿದ ಶಾಸಕರು, ಇ-ಸ್ಟಾಂಪಿಂಗ್, ಪತ್ರ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಚಾರಪಡಿಸಿ ಹೆಚ್ಚು ಪತ್ರಗಳನ್ನು ಮಾರಾಟ ಮಾಡಿ ಸಂಘಕ್ಕೆ ಲಾಭ ತರಬೇಕು ಎಂದು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡು ಸಂಘಕ್ಕೆ ಹೆಚ್ಚು ಷೇರು ಬಂಡವಾಳ ಸಂಗ್ರಹಣೆ ಮಾಡಬೇಕು. ಆಗ ಹೆಚ್ಚು ಜನರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ ಎಂದರಲ್ಲದೆ, ಪ್ರತಿ ವಾರ್ಷಿಕ ಮಹಾಸಭೆಯನ್ನು ಠೇವಣಿದಾರರನ್ನು ಸಂಘದ ವತಿಯಿಂದ ಸನ್ಮಾನಿಸಬೇಕೆಂದು ಸೂಚಿಸಿದರು.

ಸಂಘಕ್ಕೆ ಬಂದಿರುವ ಲಾಭಾಂಶವನ್ನು ಸದಸ್ಯರಿಗೆ ಡೆವಿಡೆಂಡ್ ಮತ್ತು ಉಡುಗೊರೆ ನೀಡುವ ಮೂಲಕ ಅವರನ್ನು ಆಕರ್ಷಿಸುವ ಕೆಲಸ ಮಾಡುವುದರ ಜತೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕೆಂದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಕೃಷ್ಣಪ್ರಸಾದ್ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಮಾಲೇಗೌಡ, ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿಶಿವಣ್ಣ, ಸಂಘದ ಅಧ್ಯಕ್ಷ ಎಂ.ಎಸ್.ಹರೀಶ್, ಉಪಾಧ್ಯಕ್ಷ ಕಾಳಿಕುಮಾರ್, ನಿರ್ದೇಶಕರಾದ ಕೆ.ಎಚ್.ಕೃಷ್ಣೇಗೌಡ, ನಟರಾಜ, ಡಿ.ಸಿ.ರವಿ, ಮಹೇಶ್‌ಗೌಡ, ಪ್ರೇಮಕುಮಾರ, ಕೆ.ಬಿ.ಭಾಸ್ಕರ್, ಜಿ.ಎಂ.ಲೋಹಿತ್, ಮಂಜುನಾಥ್, ಕೆ.ಎನ್.ಪ್ರಸನ್ನಕುಮಾರ್, ಮುಬೀನಾ ಬಾನು, ಎಂ.ಮಂಜುಳಾ, ಪಿ.ಎಸ್.ದೇವರಾಜು, ಸಿಬ್ಬಂದಿಗಳಾದ ಕೆ.ಎಂ.ರುಮಾನ ತಸ್ನಿಮ್, ಆರ್.ರವಿ, ಶಶಿಧರ, ಬಿ.ರವಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net