ಬಿಸಿಯೂಟ ತಯಾರಿಕರಿಗೆ ಜೀವನ ಭದ್ರತೆ ಒದಗಿಸಿ

Untitled design (1)
ಹರಪನಹಳ್ಳಿಯ ಹರಿಹರ ವೃತ್ತದಲ್ಲಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಂದಾಯ ಅಧಿಕಾರಿ ರಾಘವೇಂದ್ರ ಪ್ರಸಾದ್‌ಗೆ ಮನವಿ ಸಲ್ಲಿಸಿತು. ಎಐಟಿಯುಸಿ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್‌ಪದಾಧಿಕಾರಿಗಳಾದ ಬಳಿಗನೂರು ಕೊಟ್ರೇಶ್, ಪುಷ್ಪ, ವಿಶಾಲಮ್ಮ, ಮಂಜುಳಾ ಇದ್ದರು.
Published on

ಹರಪನಹಳ್ಳಿ: ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ಹೆಚ್ಚುವರಿ ಮಾಸಿಕ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಂದಾಯ ಅಧಿಕಾರಿ ರಾಘವೇಂದ್ರ ಪ್ರಸಾದ್‌ಗೆ ಮನವಿ ಸಲ್ಲಿಸಿತು.


ಕಳೆದ 21ವರ್ಷಗಳಿಂದ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬಿಸಿಯೂಟ ತಯಾರಿಕರಿಗೆ ಜೀವನ ಭದ್ರತೆ, ಕನಿಷ್ಠ ವೇತನವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ವೇತನ ಹೆಚ್ಚಳಕ್ಕೆ ಮುಂದಾಗಬೇಕು.

ಜಂಟಿ ಬ್ಯಾಂಕ್ ಖಾತೆ ಮಾಡಿಸುವ ಆದೇಶ ಹಿಂಪಡೆಯಬೇಕು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಶಾಲೆಯಲ್ಲಿ ಅಡುಗೆ ತಯಾರಿಸುವ ವೇಳೆ ಅನ್ನಪೂರ್ಣಮ್ಮಗೆ ಸಾಂಬರು ಮೈಮೆಲೆ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದು, ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಎಐಟಿಯುಸಿ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಪದಾಧಿಕಾರಿಗಳಾದ ಪುಷ್ಪ, ವಿಶಾಲಮ್ಮ, ಮಂಜುಳಾ, ದಾನಮ್ಮ, ಬಳಿಗನೂರು ಕೊಟ್ರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net