

ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ ಖಾಲಿ ನಿವೇಶನ ಒದಗಿಸಿ ಎಂದು ಮಡಿವಾಳ ಮಾಚಿದೇವರ ಟ್ರಸ್ಟ್ ವತಿಯಿಂದ ಪುರಸಭೆಗೆ ಮನವಿ ಸಲ್ಲಿಸಿದರು.
ಪಟ್ಟಣ ಪುರಸಭೆ ಕಾರ್ಯಲಯದ ಆವರಣದಲ್ಲಿ ಗುರುವಾರ ಮಡಿವಾಳ ಮಾಚಿದೇವರ ಟ್ರಸ್ಟ್ ವತಿಯಿಂದ ಪಟ್ಟಣದ 13ನೇ ವಾರ್ಡಿನ ಪುರಸಭಾ ಸದಸ್ಯೆ ಚೈತ್ರಾ ಚಂದ್ರಶೇಖರ್ ನೇತೃತ್ವದಲ್ಲಿ ವಿವಿಧ ವಾರ್ಡಿನ ಪುರಪಿತೃಗಳ ಸಮ್ಮುಖದಲ್ಲಿ ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಪುರಸಭಾ ಸದಸ್ಯೆ ಚೈತ್ರಾ ಚಂದ್ರಶೇಖರ್ ಮಾತನಾಡಿ, ಶ್ರೀ ರಂಗಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಮಡಿವಾಳ ಸಮುದಾಯವು 8 ರಿಂದ 10 ಸಾವಿರದಷ್ಟು ಜನಸಂಖ್ಯೆ ಹೊಂದಿ ಪ್ರಬಲ ಸಮುದಾಯವಾಗಿ ಗುರುತಿಸಿಕೊಂಡಿದೆ. ಕ್ಷೇತ್ರದಲ್ಲಿ ನಮ್ಮ ಸಮುದಾಯ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಸಮುದಾಯಿಕ ಚಟುವಟಿಕೆಗಳಲ್ಲಿ ಪ್ರಬಲವಾಗಿ ಗುರುತಿಸಿಕೊಳ್ಳಲು ಸಂಘಟನೆಯಾಗುತ್ತಿದ್ದು ನಮಗೂ ಸಹ ಸಮುದಾಯ ಭವನ ನಿರ್ಮಾಣಕ್ಕೆ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಿ ಎಂದು ,ಮನವಿ ಮಾಡಿದರು.
ಮಡಿವಾಳ ಮಾಚಿದೇವರ ಟ್ರಸ್ಟ್ ಸಂಘಟನೆ ಅಧ್ಯಕ್ಷ ಸಂಜೀವಯ್ಯ ಮಾತನಾಡಿದರು. ಪುರಸಭಾ ಸದಸ್ಯರುಗಳಾದ ಗಂಜಾಂ ಶಿವು, ಗಂಜಾಂ ಕೃಷ್ಣಪ್ಪ, ನರಸಿಂಹೇಗೌಡ, ಎಸ್.ಪ್ರಕಾಶ್ ಎಸ್.ನಂದೀಶ್, ಮಡಿವಾಳ ಮಾಚಿದೇವರ ಟ್ರಸ್ಟ್ ಗೌರವ ಅಧ್ಯಕ್ಷ ಚಂದ್ರು, ಕಾರ್ಯದರ್ಶಿ ಗಂಜಾಂ ಮಂಜುನಾಥ್, ಖಜಾಂಚಿ ಉಮೇಶ್ ಜಯರಾಮು, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ಮುಖಂಡರಾದ ಸುರೇಶ್, ಪ್ರಕಾಶ್, ಮಹೇಶ್, ದಾಸು, ಶ್ರೀಕಾಂತ್ ಇತರರು ಇದ್ದರು.