ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಿ

ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ರವಿ ಶಿರಗುಪ್ಪಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ ಸಲ್ಲಿಸಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಪೋಳ, ಪ್ರಮುಖರಾದ ಬಸವ ಪ್ರಭು, ನಿರುಪಾದಿ ಗೋಮರ್ಸಿ, ವಿಶ್ವನಾಥ ನಾಯ್ಡು ಇತರರಿದ್ದರು.
ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ರವಿ ಶಿರಗುಪ್ಪಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ ಸಲ್ಲಿಸಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಪೋಳ, ಪ್ರಮುಖರಾದ ಬಸವ ಪ್ರಭು, ನಿರುಪಾದಿ ಗೋಮರ್ಸಿ, ವಿಶ್ವನಾಥ ನಾಯ್ಡು ಇತರರಿದ್ದರು.
Published on

ಲಿಂಗಸುಗೂರು: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್)ಪಕ್ಷದಿಂದ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ರವಿ ಶಿರಗುಪ್ಪಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆಗಳು ಹಾಳಾಗಿವೆ. ಚರಂಡಿ ತ್ಯಾಜ್ಯ ತೆರವು ಮಾಡದ ಕಾರಣ ಕೊಳಚೆ ನೀರು ರಸ್ತೆಗೆ ಹರಿದು ಸಾರ್ವಜನಿಕರು, ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದೆ. ಮುಖ್ಯರಸ್ತೆ ಧೂಳಿನಿಂದ ಕೂಡಿದ್ದು, ಜನರು ಕೆಮ್ಮು, ದಮ್ಮು, ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. 7ನೇ ವಾರ್ಡ್‌ನ ಸಾರ್ವಜನಿಕ ಉದ್ಯಾನದಲ್ಲಿ ಹಾಗೂ 10ನೇ ವಾರ್ಡ್‌ನ ಡೋಹರ ಓಣಿಯಲ್ಲಿ ಬನ್ನಿಕಟ್ಟೆ ಮುಂದಿರುವ ಬೋರ್‌ವೆಲ್‌ಗಳು ದುರಸ್ತಿಯಲ್ಲಿವೆ. ಎಂಟು ತಿಂಗಳ ಹಿಂದೆ ಪುರಸಭೆ ಸಿಬ್ಬಂದಿ ಬೋರ್‌ವೆಲ್ ಮೋಟಾರು ರಿಪೇರಿಗಾಗಿ ತೆಗೆದುಕೊಂಡು ಹೋಗಿದ್ದು, ಈವರೆಗೆ ಅಳವಡಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಪೋಳ, ರಾಜ್ಯ ಎಸ್ಸಿ-ಎಸ್ಟಿ ವಿಭಾಗದ ಕಾರ್ಯದರ್ಶಿ ಬಸವ ಪ್ರಭು, ಪ್ರಮುಖರಾದ ನಿರುಪಾದಿ ಗೋಮರ್ಸಿ, ವಿಶ್ವನಾಥ ನಾಯ್ಡು, ಮಲ್ಲಿಕಾರ್ಜುನ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net