

ಯಕ್ಕುಂಡಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸುವುದು ನನ್ನ ಗುರಿ ಎಂದು ಗ್ರಾಪಂ ಅಧ್ಯೆ ಶೇಖವ್ವ ತಿಮ್ಮೇಶಿ ಎಂದು ಹೇಳಿದರು.
ಗ್ರಾಮದಲ್ಲಿ ಮಂಗಳವಾರ 15 ನೇ ಹಣಕಾಸು ಅನುದಾನದಲ್ಲಿ ನೇಗೂರ ಮತ್ತು ಬಡಿಗೇರ ಓಣಿಯಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಪಂ ಉಪಾಧ್ಯ ಮಹೇಶ ಹೊಂಗಲ, ಪಿಡಿಒ ವೆ.ಪಿ.ಬೋಳಶೆಟ್ಟಿ, ಗ್ರಾಪಂ ಸದಸ್ಯರಾದ ಹಸನಸಾಬ್ ಬಾರಿಗಿಡದ್, ಕಷ್ಣಪ್ಪ ಕಂಬಾರ, ತಾಲೀಬ್ ಮುಜಾವರ್, ಬಾದಶಾ ದೊಡಮನಿ, ಈರಪ್ಪ ಮಾದರ, ಮಲ್ಲವ್ವ ಮಾದರ, ಭೀಮವ್ವ ಮಾದರ, ನಿಜಾಮುದ್ದಿನ್ ಬಾರಿಗಿಡದ್, ಶಿವಾನಂದ ನೇಗೂರ, ಜಗದೀಶ ನಡುವಿನಮನಿ, ಗುತ್ತಿಗೆದಾರ ರಾಮು ದೊಡಮನಿ ಇತರರಿದ್ದರು.