ಎಪಿಎಂಸಿ ಪ್ರಾಂಗಣದಲ್ಲಿ ಮೂಲ ಸೌಕರ್ಯ ಕಲ್ಪಿಸಿ

09-11-Shiva-4
ರಾಯಚೂರಿನ ಎಪಿಎಂಸಿ ಪ್ರಾಂಗಣದಲ್ಲಿ ಹಮಾಲರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಎಪಿಎಂಸಿ ಕಾರ್ಯದರ್ಶಿ ಆದೆಪ್ಪಗೌಡಗೆ ಹಮಾಲರ ಶ್ರಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ, ಪದಾಕಾರಿಗಳಾದ ವಿ.ಲಕ್ಷ್ಮಿರೆಡ್ಡಿ, ಹನುಮಂತಪ್ಪ, ರಾಮರಾವ್ ಇದ್ದರು.
Published on

ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕೆಲಸ ಮಾಡುತ್ತಿರುವ ಹಮಾಲರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ರಾಯಚೂರು ಹಮಾಲರ ಶ್ರಮಿಕರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಎಪಿಎಂಸಿ ಕಾರ್ಯದರ್ಶಿ ಆದೆಪ್ಪಗೌಡಗೆ ಗುರುವಾರ ಮನವಿ ಸಲ್ಲಿಸಿ, ಪ್ರಾಂಗಣದಲ್ಲಿ ಹಮಾಲರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯಿಲ್ಲದ ಕಾರಣ ತೀವ್ರ ಸಮಸ್ಯೆಯಾಗಿದೆ ಎಂದು ದೂರಿದರು.
ಗಂಜ್‌ನಲ್ಲಿ ಹೆಚ್ಚಿನ ಧೂಳು ಇರುವುದರಿಂದ ಕಾರ್ಮಿಕರು ರೋಗ ರುಜೀನಗಳಿಗೆ ತುತ್ತಾಗುವಂತಾಗಿದ್ದಾರೆ. ಗಂಜ್ ಆವರಣದಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸಿದರೆ ಕಾರ್ಮಿಕರಿಗೆ ಅನುಕೂಲವಾಗಲಿದೆ. ವರ್ಷದಲ್ಲಿ ಕೇವಲ ಐದಾರು ತಿಂಗಳು ಮಾತ್ರ ಕೆಲಸವಿರುತ್ತಿದ್ದು, ಉಳಿದ ದಿನಗಳಲ್ಲಿ ಜೀವನೋಪಾಯಕ್ಕೆ ಸಂಕಷ್ಟವಾಗುತ್ತಿದೆ.
ಕಾರಣ ಮಾರುಕಟ್ಟೆಗೆ ಬರುವ ಕೃಷಿ ಉತ್ಪನ್ನಗಳ ಮೇಲೆ ಪ್ರತಿ ಚೀಲಕ್ಕೆ ಒಂದು ರೂ.ನಂತೆ ಕಡಿತಗೊಳಿಸಿ ಸಹಾಯಧವನ್ನು ಸಂಘಕ್ಕೆ ನೀಡಬೇಕು. ಇದರಿಂದ ಸೀಜನ್ ಇಲ್ಲದ ಸಮಯದಲ್ಲಿ ಸಂಘದಲ್ಲಿ ನೋಂದಾಯಿತ ಕಾರ್ಮಿಕರಿಗೆ ಪ್ರತಿ ತಿಂಗಳು ಸಾವಿರ ರೂ. ಪಿಂಚಣಿ ನೀಡಲು ಅನುಕೂಲವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ, ಪದಾಕಾರಿಗಳಾದ ವಿ.ಲಕ್ಷ್ಮಿರೆಡ್ಡಿ, ಹನುಮಂತಪ್ಪ, ರಾಮರಾವ್ ಹಾಗೂ ಹಮಾಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net